ಕಾಪು : ಅಪಘಾತಕ್ಕೆ ಎಡೆಮಾಡುತ್ತಿದೆ ತೆಂಕು ಪೇಟೆಯ ಮುಖ್ಯ ರಸ್ತೆ ; ಮನವಿಗೂ ಸ್ಪಂದನೆಯಿಲ್ಲ
Posted On:
24-12-2021 04:26PM
ಕಾಪು : ಇಲ್ಲಿನ ಪುರಸಭೆ ವ್ಯಾಪ್ತಿಯ ಕಾಪು ತೆಂಕು ಪೇಟೆಯ ಮುಖ್ಯ ರಸ್ತೆಯಲ್ಲಿ, ರಸ್ತೆ ಹಾಳಾಗಿದ್ದು, ನೀರಿನ ಪೈಪ್ ಅಳವಡಿಸುವ ಸಂದರ್ಭದಲ್ಲಿ ಕಾಂಕ್ರೀಟ್ ರಸ್ತೆಯನ್ನು ಕಟ್ ಮಾಡಿ ಸುಮಾರು 1ವರುಷ ಕಳೆದರೂ ರಿಪೇರಿ ಗೋಜಿಗೆ ಸಂಬಂಧ ಪಟ್ಟ ಇಲಾಖೆ ಅಥವಾ ಪುರಸಭೆ ಹೋಗಲಿಲ್ಲ.
ಇಲಾಖೆಯವರಲ್ಲಿ ಹಲವು ಬಾರಿ ತಿಳಿಸಿದರೂ ಕೂಡಾ ರಿಪೇರಿಯಾಗಲಿಲ್ಲ. ಇದರಿಂದ ಅಪಘಾತ ಆಗಿರೋದು ಎಲ್ಲರಿಗೂ ತಿಳಿದ ವಿಷಯ.
ರಸ್ತೆಯ ಬದಿಯ ದಾರಿಯಲ್ಲಿ ಡ್ರೈನೇಜ್ ಪಿಟ್ ನ್ನು ಅವೈಜ್ಞಾನಿಕವಾಗಿ ಅಳವಡಿಸಿರುವುದರಿಂದ ಪಾದಚಾರಿಗಳಿಗೆ ಅಲೆದಾಡಲು ಕಷ್ಟವಾಗಿರುತ್ತದೆ.
ಪುರಸಭೆ ಚುನಾವಣೆ ಸಂದರ್ಭದಲ್ಲಿ ಕಾಪು ಪೇಟೆಯಲ್ಲಿ ಅಲ್ಪ ಸ್ವಲ್ಪ ಡಾಂಬರು ಎರಚಿದಂತೆ ಮಾಡದೆ, ಈ ಸ್ಥಳವನ್ನು ಸರಿಯಾದ ರೀತಿಯಲ್ಲಿ ರಿಪೇರಿ ಮಾಡಿದರೆ ಅಪಘಾತಗಳನ್ನು ತಪ್ಪಿಸಬಹುದು ಎಂದು ಸಾರ್ವಜನಿಕರು ಅಭಿಪ್ರಾಯ ಪಟ್ಟಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ಸ್ಪಂದಿಸುತ್ತಾರೆಯೇ ಕಾದು ನೋಡಬೇಕು.