ಮಲ್ಪೆ : ವಿದ್ಯಾರ್ಥಿಗಳಿಗೆ ಸೈಬರ್ ಕ್ರೈಂ ಬಗ್ಗೆ ಮಾಹಿತಿ ಕಾರ್ಯಾಗಾರ
Posted On:
01-01-2022 10:32AM
ಉಡುಪಿ : ಸರಕಾರಿ ಪದವಿ ಪೂರ್ವ ಕಾಲೇಜು ಹಾಗೂ ಸರಕಾರಿ ಪ್ರೌಢ ಶಾಲೆ ಮತ್ತು ಹಳೆ ವಿದ್ಯಾರ್ಥಿ ಸಂಘ ಮಲ್ಪೆ ಜಂಟಿಯಾಗಿ ವಿದ್ಯಾರ್ಥಿಗಳಿಗೆ ಸೈಬರ್ ಕ್ರೈಂನಿಂದ ಆಗುವ ಅನಾಹುತಗಳ ಬಗ್ಗೆ ಕಾರ್ಯಾಗಾರವನ್ನು ಸಂಸ್ಥೆಯ ಸಭಾಭವನದಲ್ಲಿ ಆಯೋಜಿಸಲಾಗಿತ್ತು.
ಮುಖ್ಯ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಸೈಬರ್ ಕ್ರೈಂನ ಎಸ್ ಪಿ ಮಂಜುನಾಥ್ ಪೂಜಾರಿ ಆಗಮಿಸಿ ಕಾರ್ಯಾಗಾರವನ್ನು ನೆರವೇರಿಸಿಕೊಟ್ಟರು.
ಅಧ್ಯಕ್ಷತೆಯನ್ನು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಗೋಪಾಲ ಸಿ ಬಂಗೇರ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಎಮ್ ಮಹೇಶ್ ಕುಮಾರ್, ಸುರೇಶ್ ಕರ್ಕೇರ, ಪ್ರಾಂಶುಪಾಲರಾದ ವರ್ಗಿಸ್, ಮುಖ್ಯೋಪಾಧ್ಯಾಯರಾದ ಸಂಧ್ಯಾ ಶಿವರಾಮ್, ಕಲ್ಮಾಡಿ ಲಕ್ಷ್ಮಣ್ ಮೈಂದನ್ ಹಾಗೂ ವಿದ್ಯಾರ್ಥಿ ನಾಯಕ ಭಾಗವಹಿಸಿದ್ದರು. ನಂತರ ಹಳೆ ವಿದ್ಯಾರ್ಥಿ ಎಮ್ ಮಹೇಶ್ ಕುಮಾರ್ ಕೊಡ ಮಾಡಿದ ಐ ಡಿ ಕಾರ್ಡ್ ನ್ನು ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಯಿತು. ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಸಂಪನ್ಮೂಲ ವ್ಯಕ್ತಿ ಮಂಜುನಾಥ್ ಪೂಜಾರಿಯವರನ್ನು ಸನ್ಮಾನ ಮಾಡಲಾಯಿತು. ಹಾಗೂ ಶಾಲೆಗೆ ಸಹಕಾರ ನೀಡಿದ ಶಿವರಾಮ್ ಕಲ್ಮಾಡಿ ಹಾಗೂ ಎಮ್ ಮಹೇಶ್ ಕುಮಾರ್ ರವರನ್ನು ಪ್ರೌಢ ಶಾಲಾ ವತಿಯಿಂದ ಗೌರವಿಸಲಾಯಿತು.
ಮುಖ್ಯೋಪಾಧ್ಯಾಯರಾದ ಸಂಧ್ಯಾರವರು ಸ್ವಾಗತಿಸಿ, ಸತೀಶ್ ಭಟ್ ನಿರೂಪಿಸಿ, ರಂಜನ್ ವಂದಿಸಿದರು.