ದೊಡ್ಡನಗುಡ್ಡೆ : ಪಂಚ ಜುಮಾದಿ ದೈವಸ್ಥಾನದ ವಠಾರದ ಸ್ವಚ್ಛತಾ ಕಾರ್ಯಕ್ರಮ
Posted On:
09-01-2022 10:13PM
ಉಡುಪಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ಉಡುಪಿ ಮಣಿಪಾಲ ವಲಯ, ಶಿವಳ್ಳಿ ಎ ಕಾರ್ಯಕ್ಷೇತ್ರ, ಪ್ರಜ್ಞಾ ಒಕ್ಕೂಟದ ವತಿಯಿಂದ ದೊಡ್ಡನಗುಡ್ಡೆ ಪಂಚ ಜುಮಾದಿ ದೈವಸ್ಥಾನದ ವಠಾರದಲ್ಲಿ ಶ್ರದ್ಧಾ ಕೇಂದ್ರ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು.
ಪಂಚ ಜುಮಾದಿ ದೈವಸ್ಥಾನದ ಗುರಿಕಾರರು ನಿತಿನ್ ಪೂಜಾರಿ, ಹಾಗೂ ಅಖಿಲ ಭಾರತ ತುಳುನಾಡ ದೈವಾರಾಧಕರ ಒಕ್ಕೂಟ (ರಿ.) ಉಡುಪಿ ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ಹಾಗೂ ಪಂಚ ಜುಮಾದಿ ದೈವಸ್ಥಾನದ ಪ್ರಧಾನ ಅರ್ಚಕರಾದ ವಿನೋದ್ ಶೆಟ್ಟಿ ಹಾಗೂ ದೈವಸ್ಥಾನದ ಟ್ರಸ್ಟಿ ಸದಸ್ಯರಾದ ನಿತ್ಯಾನಂದ ಜೋಗಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಪದಾಧಿಕಾರಿಗಳಾದ ಜ್ಯೋತಿ ಹರಿಣಾಕ್ಷಿ, ಸೇವಪ್ರತಿನಿಧಿ ಪ್ರೀತಿ ಉಪಸ್ಥಿತರಿದ್ದರು.