ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಲಾಕ್ ಡೌನ್ ಹಾಗೂ ನೈಟ್ ಕರ್ಫ್ಯೂ ಸಮಸ್ಯೆ : ದೈವಾರಾಧಕರ ಒಕ್ಕೂಟದಿಂದ ಸಚಿವ ಸುನಿಲ್ ಕುಮಾರ್ ಮತ್ತು ಶಾಸಕ ರಘುಪತಿ ಭಟ್ ರವರಿಗೆ ಮನವಿ

Posted On: 11-01-2022 02:24PM

ಉಡುಪಿ : ದೈವಾರಾಧಕರ ಒಕ್ಕೂಟ ಉಡುಪಿ ಮಂಗಳೂರು ಹಾಗೂ ಹೋರಾಟ ಸಮಿತಿ ವತಿಯಿಂದ ಇಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ, ಕಾರ್ಕಳ ಶಾಸಕರಾದ ಸುನಿಲ್ ಕುಮಾರ್ ಮತ್ತು ಉಡುಪಿ ಶಾಸಕರಾದ ರಘುಪತಿ ಭಟ್ ಅವರನ್ನು ಭೇಟಿಯಾಗಿ ಈ ವರ್ಷದ ಮೂರನೇ ಬಾರಿಯ ಲಾಕ್ ಡೌನ್ ಹಾಗೂ ನೈಟ್ ಕರ್ಫ್ಯೂನಿಂದ ಪ್ರಸ್ತುತ ದಿವಸಗಳಲ್ಲಿ ದೈವಾರಾಧಕರಿಗೆ ಆಗುತ್ತಿರುವ ಸಮಸ್ಯೆಗಳನ್ನು ಅವರೊಂದಿಗೆ ತಿಳಿಸಿ ಮನವಿ ಸಲ್ಲಿಸಲಾಯಿತು.

ಮನವಿಯನ್ನು ಸ್ವೀಕರಿಸಿದ ಸಚಿವರು ಮತ್ತು ಶಾಸಕರು ನಿಮ್ಮ ಸಮಸ್ಯೆಗೆ ಸ್ಪಂದಿಸಲು ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸುಧಾಕರ ಅಮೀನ್, ವಿನೋದ್ ಶೆಟ್ಟಿ, ಸುಧಾಕರ್ ಶೆಟ್ಟಿ, ಸುಕುಮಾರ್ ಪೂಜಾರಿ, ಪ್ರವೀಣ್ ಶೆಟ್ಟಿ, ಅಶೋಕ್ ಶೆಟ್ಟಿ, ನವೀನ್ ಪಾತ್ರಿ ಕುಂಜಿಬೆಟ್ಟು, ನರಸಿಂಹ ಪರವ, ಉಗ್ಗಪ್ಪ ಪರವ, ಪಾಂಡುರಂಗ ಪಾನರ, ಸುಧಾಕರ್ ಪಾಣಾರ, ರಂಗ ಪಾಣಾರ, ಸಮಿತ ಶೆಟ್ಟಿ, ಯತಿನ್ ಶೆಟ್ಟಿ, ಸದಾನಂದ ಸಾಲಿಯಾನ್, ಸಚಿನ್ ಸಾಲಿಯಾನ್, ಯತಿನ್ ಶೆಟ್ಟಿ, ಸದಸ್ಯರು ಉಪಸ್ಥಿತಿಯಿದ್ದರು.