ಉಡುಪಿ :ವಿಶ್ವ ಹಿಂದೂ ಪರಿಷದ್ ಬಜರಂಗದಳ ಉಡುಪಿ ಜಿಲ್ಲೆ ವತಿಯಿಂದ ಕಳೆದ ಹಲವಾರು ಸಮಯಗಳಿಂದ ಹಿಂದೂ ದೈವ ದೇವರುಗಳ ಬಗ್ಗೆ ಅಪಹಾಸ್ಯ ಮತ್ತು ವಿಕೃತಿಯಾಗಿ ಅಶ್ಲೀಲವಾಗಿ ಚಿತ್ರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಬಿಂಬಿಸುತ್ತಿರುವ ಮತ್ತು ಕೊರಗಜ್ಜ ದೈವ ದೇವರ ವೇಷ ಧರಿಸಿ ಅವಮಾನ ಮಾಡಿರುವವರ ವಿರುದ್ಧ ಉಡುಪಿಯ ಬೊಬ್ಬರ್ಯ ಕಾಂತೇರಿ ಜುಮಾದಿ ಕಲ್ಕುಡ ಕೊರಗಜ್ಜ ಪರಿವಾರ ದೈವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಲಾಯಿತು.
ಈ ಸಂದರ್ಭದಲ್ಲಿ ನಗರ ಸಭೆಯ ಮಾಜಿ ಸದಸ್ಯ ಶ್ಯಾಮ್ ಪ್ರಸಾದ್ ಕುಡ್ವ, ವಿಶ್ವ ಹಿಂದೂ ಪರಿಷದ್ ನಗರ ಕಾರ್ಯದರ್ಶಿ ಅವಿನಾಶ್ ಶೇರಿಗಾರ್, ಅಖಿಲ ಭಾರತ ತುಳುನಾಡ ದೈವಾರಾಧಕರ ಒಕ್ಕೂಟ (ರಿ.) ಉಡುಪಿ ಜಿಲ್ಲೆ ಇದರ ಪ್ರಧಾನ ಕಾರ್ಯದರ್ಶಿ ಹಾಗೂ ಬೊಬ್ಬರ್ಯ ಯುವ ಸೇವಾ ಸಮಿತಿ ಇದರ ಗೌರವ ಅಧ್ಯಕ್ಷರಾದ ವಿನೋದ್ ಶೆಟ್ಟಿ, ಪೇಜಾವರ ಮಠದ ಮಹೇಶ್ ಕುಲಕರ್ಣಿ, ಬೊಬ್ಬರ್ಯ ಯುವ ಸೇವಾ ಸಮಿತಿ ಅಧ್ಯಕ್ಷರಾದ ವರದಾಸ್ ಕಾಮತ್, ರಾಮಚಂದ್ರ ಭಟ್ ಹಾಗೂ ಸಂಘಟನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.