ಮೊಬೈಲ್ನಲ್ಲಿ ಲೋನ್ ಆ್ಯಪ್ ಗಳನ್ನು ಬಳಸುವಾಗ ಜಾಗೃತರಾಗಿ ; ಪೋಲೀಸ್ ಇಲಾಖೆಯಿಂದ ಎಚ್ಚರಿಕೆ
Posted On:
12-01-2022 07:00PM
ಮಂಗಳೂರು : ಸುರತ್ಕಲ್ ಠಾಣಾ ವ್ಯಾಪ್ತಿಯಲ್ಲಿ ಸುಶಾಂತ ಕುಮಾರ್ (26) ಎನ್ನುವಾತ ತಾನು ಕೆಲಸ ಮಾಡುವ ಸ್ಥಳದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಆತನು ತನ್ನ ಡೆತ್‌ನೋಟ್‌ನಲ್ಲಿ ಸಾಲ ಮಾಡಿರುವುದಾಗಿ ಹಾಗೂ ಆನ್‌ಲೈನ್ ಲೋನ್ ಬಗ್ಗೆ ನಮೂದಿಸಿದ್ದು, ಆನ್‌ಲೈನ್ ಲೋನ್ ಆ್ಯಪ್ ನವರು ಕಿರುಕುಳ ನೀಡಿದ್ದು ಎಂದು ನಮೂದಿಸಿದ್ದ ಈ ಬಗ್ಗೆ ಸುರತ್ಕಲ್ ಠಾಣೆ ಪ್ರಕರಣ ದಾಖಲಾಗಿರುತ್ತದೆ. ಇದೀಗ ಸಾರ್ವಜನಿಕರು ಅಂತಹ ಆ್ಯಪ್ ಗಳ ಬಗ್ಗೆ ಜಾಗರೂಕರಾಗಿರಬೇಕೆಂದು ಎಚ್ಚರಿಸಿದ್ದಾರೆ.
ಲೋನ್ ಆ್ಯಪ್ ಪ್ರಾರಂಭದಲ್ಲಿ ಚೈನದಲ್ಲಿ ಆರಂಭವಾಗಿದ್ದು, ನ್ಯೂಯ್ಡ ಲೋನ್ ಆ್ಯಪ್ ಎನ್ನುವ ಆ್ಯಪ್ ಕೂಡ ಚಾಲನೆಯಲ್ಲಿ ಇತ್ತು. ಅಂದರೆ ಈ ಆ್ಯಪ್‌ನ್ನು ಇನ್‌ಸ್ಟಾಲ್ ಮಾಡುವಾಗ ಬತ್ತಲೆ ಫೋಟೋವನ್ನು ಪಡೆಯುತ್ತಿದ್ದು, ಒಂದು ವೇಳೆ ಸರಿಯಾಗಿ ಲೋನ್ ಕಟ್ಟದಿದ್ದರೆ ಬೇರೆಯವರಿಗೆ ಕಳುಹಿಸುವುದಾಗಿಯೂ ಹೆದರಿಸುತ್ತಿದ್ದರು.
ಭಾರತದಲ್ಲಿ ಸುಮಾರು 600ಕ್ಕಿಂತ ಹೆಚ್ಚು ಲೋನ್ ಆ್ಯಪ್‌ಗಳು ಇದ್ದು, ಇವುಗಳಿಗೆ ಯಾವುದೇ ಆರ್‌ಬಿಐನಿಂದ ಮಾನ್ಯತೆ ಇರುವುದಿಲ್ಲ. ಇವುಗಳು ಪ್ಲೇಸ್ಟೋರ್‌ನಲ್ಲಿ ಡೌನ್‌ಲೋಡ್ ಮಾಡುವಂತ ಆ್ಯಪ್ ಆಗಿದ್ದು, ಇನ್‌ಸ್ಟಾಲ್ ಮಾಡುವಾಗ ಅನೇಕ ಅನುಮತಿಯನ್ನು ಕೇಳುತ್ತಾರೆ. ಉದಾಹರಣೆಗೆ ಕಾಂಟಾಕ್ಟ್, ವಿಡಿಯೋ ಫೋಟೋ ಕ್ಯಾಮಾರ ಇತ್ಯಾದಿಗಳಿಗೆ ಅನುಮತಿಯನ್ನು ಕೇಳುತ್ತಾರೆ. ಎಲ್ಲಾದಕ್ಕೂ ಎಸ್ ಎಸ್ ಹಾಕಿ ಇನ್ ಸ್ಟಾಲ್ ಮಾಡಿದ ನಂತರ ಸಣ್ಣ ಪ್ರಮಾಣದ ಸಾಲ ಅಂದರೆ ರೂ 3000/- ಅಥವಾ 5000/- ಹಣ ನೀಡುತ್ತಾರೆ. ನಂತರ ಸಾಲವನ್ನು ಹಿಂತಿರುಗಿಸುವಾಗ 30 ರಿಂದ 60 % ಬಡ್ಡಿಯನ್ನು ವಿಧಿಸಿ ಸಾಲ ಚುಕ್ತ ಮಾಡಲು ಹೇಳುತ್ತಾರೆ. ಒಂದು ವೇಳೆ ಸಾಲವನ್ನು ಹಿಂದುರಿಗಿಸಲು ಇದ್ದಲ್ಲಿ ಅವರ ಕಾಂಟಾಕ್ಟ್, ನಂಬ್ರಗೆ ಪೋನ್ ಮಾಡಿ ಲೋನ್ ಪಡೆದವರ ಬಗ್ಗೆ ಹೇಳುವುದಾಗಿಯೂ, ಯಾವುದಾದರೂ ಫೋಟೋ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವುದಾಗಿ ಹೆದರಿಸುತ್ತಾರೆ. ಕ್ರೇಡಿಟ್ ರೇಟ್ ಕಡಿಮೆಯಾಗುತ್ತದೆ. ನಿಮ್ಮ ಮೇಲೆ 420, ಚೀಟಿಂಗ್ ಕೇಸ್ ಬುಕ್ ಮಾಡುವುದಾಗಿ ಹೇಳುತ್ತಾರೆ. ಕೆಲವೊಮ್ಮೆ ಪ್ರಕರಣ ದಾಖಲಾಗಿವೆ ಎಂದು ಹೇಳಿ ನಕಲಿ ಎಫ್‌ಐಆರ್‌ಯನ್ನು ಕಳಿಸುತ್ತಾರೆ. ನಿಮಗೆ ಇನ್ನು ಮುಂದೆ ಯಾವುದೇ ಬ್ಯಾಂಕಿನ ಸಾಲ ಸಿಗುವುದಿಲ್ಲ ಎಂದು ಹೆದರಿಸುತ್ತಾರೆ.
ಸಾರ್ವಜನಿಕರು ಇಂತಹ ಲೋನ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಬಾರದು ಇತರ ಯಾವುದೇ ಆ್ಯಪ್ ಡೌನ್‌ಲೋಡ್ ಮಾಡಿದರೂ ಕೂಡ ನಿಮ್ಮ ಮೊಬೈಲ್ ಕಾಂಟ್ಯಾಕ್ಟ್, ವಿಡಿಯೋ, ಫೋಟೋಸ್ ನೋಡಲು ಅನುಮತಿಯನ್ನು ನೀಡಬಾರದು. ಯಾವುದೇ ಲೋನ್ ಆ್ಯಪ್ ನ್ನು ಇನ್ ಸ್ಟಾಲ್ ಮಾಡುವಾಗ ಎಸ್ ಎಸ್ ಎಂದು ಎಲ್ಲಾದಕ್ಕೂ ಅನುಮತಿ ನೀಡಿ ತೊಂದರೆಯಲ್ಲಿ ಸಿಕ್ಕಿಹಾಕಿಕೊಳ್ಳಬಾರದು. ಅತ್ಯಂತ ಕಡಿಮೆ ಸಾಲವನ್ನು ನೀಡಿ ದುಬಾರಿ ಹಣವನ್ನು ಪಡೆಯುವುದು. ಒಂದು ವೇಳೆ ಲೋನ್ ಕಟ್ಟದಿದ್ದಲ್ಲಿ ನಿಮ್ಮ ಮೊಬೈಲ್‌ನಲ್ಲಿರುವ ಎಲ್ಲಾ ಮಾಹಿತಿಯನ್ನು ಇಟ್ಟುಕೊಂಡು ಹೆದರಿಸುವ ಮತ್ತು ಬ್ಲಾಕ್‌ಮೇಲ್ ಮಾಡಿ ಹಣವನ್ನು ವಸೂಲು ಮಾಡುತ್ತಿದ್ದು ಸಾರ್ವಜನಿಕರು ಜಾಗ್ರತೆ ವಹಿಸಬೇಕು ಎಂದು ಪೋಲಿಸ್ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.