ಕಾಪು : ಇಲ್ಲಿನ ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಆವರಣದಲ್ಲಿ ಆರ್ಥಿಕ ಸಮಿತಿಯ ಪದಾಧಿಕಾರಿಗಳ ಮತ್ತು ಒಂಬತ್ತು ತಂಡಗಳ ಸಂಚಾಲಕರ ಸಭೆಯು ಜನವರಿ 11ರಂದು ಜರುಗಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಆರ್ಥಿಕ ಸಮಿತಿಯ ಪ್ರಧಾನ ಸಂಚಾಲಕರಾದ ಉದಯ ಸುಂದರ್ ಶೆಟ್ಟಿಯವರು ದೇವಿಯ ಅಭಯ ವಾಕ್ಯದಂತೆ ಪ್ರತಿಯೊಬ್ಬರ ಮನೆ- ಮನಗಳಿಗೆ ಸುದ್ದಿ ತಲುಪಿಸುವುದು ನಮ್ಮೆಲ್ಲರ ಮಹತ್ತರ ಜವಾಬ್ದಾರಿಯಾಗಿದೆ.
ಇದಕ್ಕಾಗಿ ನಾವೆಲ್ಲರೂ ಐಕ್ಯ ಮತದಿಂದ ಪ್ರತಿಯೊಬ್ಬ ಭಕ್ತರನ್ನು ಸಂಪರ್ಕಿಸಿ ಸುದ್ದಿ ತಲುಪಿಸಿ ದೇಗುಲದ ನವನಿರ್ಮಾಣಕ್ಕೆ ಶ್ರಮಿಸಬೇಕಿದೆ ಎಂದರು.
ಈ ಸಂದರ್ಭದಲ್ಲಿ ದೇವಳದ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಕೆ.ವಾಸುದೇವ ಶೆಟ್ಟಿ, ಗೌರವಾಧ್ಯಕ್ಷರಾದ ಮನೋಹರ್ ಶೆಟ್ಟಿ, ಗೌರವ ಸಲಹೆಗಾರರಾದ ನಿರ್ಮಲ್ ಕುಮಾರ್ ಹೆಗ್ಡೆ, ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕರಾದ ಯೋಗೀಶ್. ವಿ. ಶೆಟ್ಟಿ ಬಾಲಾಜಿ, ಆರ್ಥಿಕ ಸಮಿತಿಯ ಮುಖ್ಯ ಸಂಚಾಲಕರಾದ ರತ್ನಾಕರ ಹೆಗ್ಡೆ ಕಲ್ಯಾ ಬೀಡು, ರಮೇಶ್ ಶೆಟ್ಟಿ ಕೊಲ್ಯ, ಸಂದೀಪ್ ಶೆಟ್ಟಿ ಮುಂಬೈ (ಶಿರ್ವ), ರವಿರಾಜ್ ಶೆಟ್ಟಿ ಮತ್ತು ಒಂಬತ್ತು ತಂಡಗಳ ಮುಖ್ಯ ಸಂಚಾಲಕರು ಹಾಗೂ ಸಂಚಾಲಕರುಗಳು ಉಪಸ್ಥಿತರಿದ್ದರು.