ದಿನಾಂಕ 12/01/2022 ರಂದು ಮಧ್ಯಾಹ್ನದ ಸಮಯದಲ್ಲಿ ನೆಹರೂ ಮೈದಾನದ ಪರಿಸರದಲ್ಲಿ ಇಬ್ಬರು ವ್ಯಕ್ತಿಗಳು ಬೊಬ್ಬೆ ಹೊಡೆದು ಓಡುತ್ತಾ ಪರಿಸರದ ಸಾರ್ವಜನಿಕರಿಗೆ ಆತಂಕ ಹಾಗೂ ವಾಹನ ಸಂಚಾರಕ್ಕೆ ಅಡ್ಡಿ ಉಂಟು ಮಾಡುತ್ತಾ ಪರಾರಿಯಾಗಲು ಯತ್ನಿಸಿದಾಗ ಪೊಲೀಸ್ ಕಮಿಷನರ್ ಕಛೇರಿಯಲ್ಲಿದ್ದ ಸಿಬ್ಬಂದಿ ಹಾಗೂ ಸಂಚಾರಿ ಪೊಲೀಸ್ ಸಿಬ್ಬಂದಿಗಳು ಅವರನ್ನು ಬೆನ್ನಟ್ಟಿ ಹಿಡಿದು ವಿಚಾರಿಸಿದಾಗ ಬಿಹಾರಿ ಮೂಲದ ವ್ಯಕ್ತಿಯ ಮೊಬೈಲ್ ಹಾಗೂ ಇತರ ವಸ್ತುಗಳನ್ನು ಮೂವರು ವ್ಯಕ್ತಿಗಳು ದರೋಡೆ ಮಾಡಿ ಪರಾರಿಯಾಗಿರುತ್ತಾರೆ ಎಂದು ತಿಳಿಸಿದಾಗ ಅಲ್ಲೇ ಇದ್ದ ಆರೋಪಿ ಶಮಂತ್ (20 ವರ್ಷ) ನನ್ನು ವಶಕ್ಕೆ ಪಡೆದು, ಅವನ ಮುಖಾಂತರ ಆತನ ಇತರ ಸಹಚರರ ಮಾಹಿತಿ ಪಡೆದು, ತಕ್ಷಣವೇ ರೈಲ್ವೇ ನಿಲ್ದಾಣ ಹಾಗೂ ಹಂಪನಕಟ್ಟೆ ಪರಿಸರದಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಇನ್ನೊಬ್ಬ ಆರೋಪಿ ಹರೀಶ್ ಪೂಜಾರಿ (32 ವರ್ಷ) ನನ್ನು ವಶಕ್ಕೆ ಪಡೆಯಲಾಯಿತು. ಆತನ ಜೊತೆ ಇದ್ದ ಇನ್ನೊಬ್ಬ ಆರೋಪಿ ರಾಜೇಶ್ ಎಂಬವನು ಪರಾರಿಯಾಗಿರುತ್ತಾನೆ. ಪರಾರಿಯಾಗಿರುವ ಆರೋಪಿಯ ಬಗ್ಗೆ ಮಾಹಿತಿ ಲಭ್ಯವಾಗಿರುತ್ತದೆ. ದರೋಡೆ ನಡೆಸಿದ ಸೊತ್ತುಗಳಾದ ಸ್ಯಾಮ್‌ಸಂಗ್ ಮೊಬೈಲ್ ಫೋನನ್ನು ಆರೋಪಿಗಳಿಂದ ವಶಕ್ಕೆ ಪಡೆಯಲಾಗಿರುತ್ತದೆ.
ಆರೋಪಿಗಳು
1) ಹರೀಶ್ ಪೂಜಾರಿ (32 ವರ್ಷ), ಪಾಲನೆ, ನೀರುಮಾರ್ಗ, ಕುಡುಪು, ಮಂಗಳೂರು. 2) ಶಮಂತ್ (20 ವರ್ಷ), ಅತ್ತಾವರ, ಬಾಬುಗುಡ್ಡೆ, ಮಂಗಳೂರು.