ಉಡುಪಿ : ಜಿಲ್ಲೆಯಲ್ಲಿ ಒಂದು ದೊಡ್ಡ ಮಟ್ಟಿನಲ್ಲಿ ಸದ್ದು ಮಾಡಿದ್ದ ಕುಂತಲ ನಗರ ಗ್ರಾಮದಲ್ಲಿ ಮೋಕ್ಷಗಿರಿ ಎಂಬ ಪರ್ವತದಲ್ಲಿ 2 ತಿಂಗಳ ಹಿಂದೆಯಷ್ಟೇ ವಿಶ್ವ ಹಿಂದೂ ಪರಿಷತ್ ಭಜರಂಗದಳ ಕಾರ್ಯಕರ್ತರು ಸ್ಥಾಪಿಸಿದ್ದ ಭಾಗವಧ್ವಜ ಕಟ್ಟೆಯನ್ನು ಯಾರೋ ಕಿಡಿಗೇಡಿಗಳು ಧ್ವಂಸ ಮಾಡಿದ್ದರು.
ಇಂದು ವಿಶ್ವ ಹಿಂದೂ ಪರಿಷತ್ ಬಜರಂಗದಳ ಮೋಕ್ಷಗಿರಿ ಘಟಕದ ಕಾರ್ಯಕರ್ತರು ದ್ವಜಕಟ್ಟೆಯನ್ನು ಮರುಸ್ಥಾಪಿಸಿದರು .ಕಟ್ಟೆಯನ್ನು ದ್ವOಸ ಮಾಡಿದ ಕಿಡಿಗೇಡಿಗಳಿಗೆ ಕಾರ್ಯಕರ್ತರು ಸ್ಪಷ್ಟ ಎಚ್ಚರಿಕೆಯನ್ನು ಕೂಡ ನೀಡಿದರು.
ಮುಂದಿನದಿನಗಳಲ್ಲಿ ಕಿಡಿಗೇಡಿಗಳು ಬಾಲ ಬಿಚ್ಚಿದಲ್ಲಿ ಅವರ ಮನೆಯನ್ನು ಕೇಸರಿಮಯ ಮಾಡಿಯೇ ಮಾಡುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಮೆಂಡನ್, ವಿಹಿಂಪ ಉಡುಪಿ ಜಿಲ್ಲಾ ಸೇವಾ ಪ್ರಮುಖ್ ದೀಪಕ್ ಮೂಡುಬೆಳ್ಳೆ, ಉಡುಪಿ ಬಜರಂಗದಳ ಗ್ರಾಮಾಂತರ ಪ್ರಖಂಡ ಸಂಚಾಲಕರಾದ ಅನಿಲ್ ಅತ್ರಾಡಿ, ಶಿರ್ವ ವಲಯಧ್ಯಕ್ಷರಾದ ವಿಖ್ಯಾತ್ ಭಟ್, ಮೋಕ್ಷಗಿರಿ ವಿಂಹಿಪ ಅಧ್ಯಕ್ಷರಾದ ಅಶೋಕ್ ಶೆಟ್ಟಿ , ಬಜರಂಗದಳ ಸಂಚಾಲಕರಾದ ನಿಶಾಂತ್ ಪೂಜಾರಿ ಹಾಗೂ ಸಂಘಟನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.