ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯ ಶವ
Posted On:
21-01-2022 09:14PM
ಮಂಗಳೂರು : ಕುದ್ರೋಳಿಯಲ್ಲಿರುವ ಬಾಡಿಗೆ ಮನೆಯಲ್ಲಿ ಸುಮಾರು 5 ತಿಂಗಳಿನಿಂದ ಸೂಫಿಯಾ ಬೇಗಂ ಮತ್ತು ಆಕೆಯ ಗಂಡ ವಾಸ್ತವ್ಯ ಮಾಡಿಕೊಂಡಿರುತ್ತಾರೆ. ಜನವರಿ 21ರಂದು ಸೂಫಿಯಾ ಬೇಗಂ ಮಲಗಿದ್ದ ಕೋಣೆಯ ಕಿಟಕಿಯ ಕಬ್ಬಿಣದ ಸರಳಿಗೆ ಚೂಡಿದಾರದ ಶಾಲನ್ನು ಕುತ್ತಿಗೆಗೆ ಕಟ್ಟಿ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದೆ.
ಆಕೆಯ ಗಂಡ ಪೈಂಟಿಂಗ್ ಕೆಲಸ ಮಾಡಿಕೊಂಡಿದ್ದು, ಸೂಫಿಯಾ ಬೇಗಂ ಮನೆಯಲ್ಲೇ ಇರುವುದಾಗಿದೆ.
ಜನವರಿ 20ರಂದು ರಾತ್ರಿ ಎಂದಿನಂತೆ ಗಂಡ, ಹೆಂಡತಿ ಊಟ ಮಾಡಿ ಮಲಗಿದ್ದು, 21 ರ ಮುಂಜಾನೆ 4ಗಂಟೆಗೆ ಇಬ್ಬರೂ ಎದ್ದು ಅಡುಗೆ ಕೆಲಸ ಮಾಡಿ ಮಲಗಿರುತ್ತಾರೆ. ಬೆಳಿಗ್ಗೆ 07.45 ಗಂಟೆಗೆ ಆಕೆಯ ಗಂಡ ಎಚ್ಚರಗೊಂಡು ನೋಡಿದಾಗ ಹೆಂಡತಿ ಸೂಫಿಯಾ ಬೇಂಗಂ ಮಲಗಿದ್ದ ಕೋಣೆಯ ಕಿಟಕಿಯ ಕಬ್ಬಿಣದ ಸರಳಿಗೆ ಚೂಡಿದಾರದ ಶಾಲನ್ನು ಕುತ್ತಿಗೆಗೆ ಕಟ್ಟಿ ನೇಣು ಬಿಗಿದ ಸ್ಥಿತಿಯಲ್ಲಿದ್ದು, ಅವರನ್ನು ಕರೆದಾಗ ಸ್ಪಂದಿಸದೇ ಇದ್ದ ಕಾರಣ ಕೂಡಲೇ ಆಕೆಯ ಕುತ್ತಿಗೆಗೆ ಕಟ್ಟಿದ್ದ ಶಾಲನ್ನು ಬಿಚ್ಚಿ ನೆಲದಲ್ಲಿ ಮಲಗಿಸಿರುತ್ತಾರೆ.
ಬಳಿಕ ಸ್ನೇಹಿತರಿಗೆ ಹಾಗೂ ನೆರೆಹೊರೆಯವರಿಗೆ ತಿಳಿಸಿದ್ದು ಅವರು ಬಂದು ನೋಡಿ ಪರೀಕ್ಷಿಸಿದಾಗ ಸೂಫಿಯಾ ಬೇಗಂ ರವರ ದೇಹವು ತಣ್ಣಗಾಗಿದ್ದು, ಮೃತಪಟ್ಟಂತೆ ಕಂಡುಬಂದಿರುತ್ತದೆ. ಮೃತ ಸೂಫಿಯಾ ಬೇಗಂ ಮೃತ ಶರೀರದ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ದೂರುದಾರ ವಿನಂತಿಸಿದ್ದಾರೆ.