ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಹೆಜಮಾಡಿ : ಬೀಚ್ ಸ್ವಚ್ಛತೆ, ಜಲ ಜಾಗೃತಿ ಅಭಿಯಾನದ ತರಬೇತಿ ಕಾರ್ಯಕ್ರಮ

Posted On: 30-01-2022 10:59PM

ಹೆಜಮಾಡಿ : ಭಾರತ ಯುವಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ, ಉಡುಪಿ ಮತ್ತು ಗ್ರಾಮ ಪಂಚಾಯತ್, ಹೆಜಮಾಡಿ, ಕರಾವಳಿ ಯುವಕ-ಯುವತಿ ವೃಂದ (ರಿ.) ಹೆಜಮಾಡಿ, ವಿಜಯಾ ಕಾಲೇಜು, ಮುಲ್ಕಿ ಇದರ ರಾಷ್ಟ್ರೀಯ ಸೇವಾ ಯೋಜನೆ ಘಟಕ, ಎನ್‌ಸಿಸಿ ಘಟಕ, ರೋವರ್ಸ್ ಮತ್ತು ರೇಂಜರ್ಸ್ ಘಟಕ, ಯೂತ್ ರೆಡ್ ಕ್ರಾಸ್ ಘಟಕ ಇವರುಗಳ ಸಂಯುಕ್ತ ಆಶ್ರಯದಲ್ಲಿ ಹೆಜಮಾಡಿ ಬೀಚ್ ಸ್ವಚ್ಛತಾ ಕಾರ್ಯಕ್ರಮ ಹಾಗೂ ಯುವ ಜನತೆಗೆ ಜಲ ಜಾಗೃತಿ ಅಭಿಯಾನದ ತರಬೇತಿ ಕಾರ್ಯಕ್ರಮ ಹೆಜಮಾಡಿಯ ಅಮಾವಾಸ್ಯೆ ಕರಿಯ ಕಡಲ ಕಿನಾರೆಯಲ್ಲಿ ಜರಗಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಲಾಲಾಜಿ ಆರ್. ಮೆಂಡನ್ ನಿರ್ವಹಿಸಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಸಂಘಟನೆಗಳ ಕಾರ್ಯ ಶ್ಲಾಘನೀಯ ಎಂದರು.

ಅಭಿಯಾನಕ್ಕೆ ಉಡುಪಿ ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳಾದ ಸದಾಶಿವ ಪ್ರಭು ಚಾಲನೆ ನೀಡಿದರು. ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ, ರಾಜ್ಯ ಸಂಪನ್ಮೂಲ ವ್ಯಕ್ತಿ ಮತ್ತು ತರಬೇತುದಾರಾದ ಜೋಸಫ್ ಜಿ. ಎಮ್ ರಬೆಲ್ಲೊ ಜಲ ಜಾಗೃತಿ ಬಗ್ಗೆ ಮಾಹಿತಿ ನೀಡಿದರು.

ಹೆಜಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಾಣೇಶ ಹೆಜಮಾಡಿ, ಸದಸ್ಯರಾದ ಹೇಮಾನಂದ ಪುತ್ರನ್, ಪಾಂಡುರಂಗ ಕರ್ಕೇರ ,ಲೀಲೇಶ್ ಸುವರ್ಣ, ರೇಷ್ಮಾ ಮೆಂಡನ್,ಉಡುಪಿ ನೆಹರು ಯುವ ಕೇಂದ್ರದ ಅಧಿಕಾರಿ ವಿಲ್ಫ್ರೆಡ್ ಡಿಸೋಜ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ನೀತಾ ಗುರುರಾಜ್, ಮುಲ್ಕಿ ವಿಜಯ ಕಾಲೇಜಿನ ಪ್ರಾಧ್ಯಾಪಕ ವೆಂಕಟೇಶ್ ಭಟ್, ಮೀನುಗಾರ ಮುಖಂಡ ನಾರಾಯಣ ಕೆ. ಮೆಂಡನ್, ಹೆಜಮಾಡಿ ಕರಾವಳಿ ಯುವಕ-ಯುವತಿ ವೃಂದದ ಅಧ್ಯಕ್ಷರುಗಳಾದ ಅಶೋಕ್ ವಿ ಕೆ, ಪವಿತ್ರಾ ಗಿರೀಶ್ ಮುಂತಾದವರು ಉಪಸ್ಥಿತರಿದ್ದರು.