ಸುರತ್ಕಲ್ : ಇಲ್ಲಿನ ಠಾಣಾ ವ್ಯಾಪ್ತಿಯ ಕಾಟಿಪಳ್ಳ ಗ್ರಾಮದಲ್ಲಿ ಯುವಕರಿಬ್ಬರು ತಾವು ವಾಸವಿದ್ದ ಬಾಡಿಗೆ ಮನೆ ತೆರವಲ್ಲಿ ಮಧ್ಯಸ್ಥಿಕೆ ವಹಿಸಿದ್ದಾರೆ ಎಂಬ ಕಾರಣದಿಂದ ವ್ಯಕ್ತಿಯೋರ್ವರ ಮೇಲೆ ಹಲ್ಲೆ ನಡೆಸಿದ ಪ್ರಕರಣ ಸುರತ್ಕಲ್ ಠಾಣೆಯಲ್ಲಿ ದಾಖಲಾಗಿದೆ.
ಮೊಹಮ್ಮದ್ ಅನಾಸ್ ರವರು ಫೆಬ್ರವರಿ 1ರಂದು ರಾತ್ರಿ 11-45ರ ಸುಮಾರಿಗೆ ತಮ್ಮ ಪರಿಚಯದ ಅಬೂಬಕರ್ ಮತ್ತು ಹ್ಯಾರಿಸ್ ರವರ ಬಳಿ ಅವರ ಮನೆಯ ಮುಂದೆ ನಿಂತು ಮಾತನಾಡುತ್ತಿರುವ ಸಮಯ ಆರೋಪಿಗಳಾದ ಚಾರು, ರವೂಫ್, ಅಕಿ, ಮುಸ್ತಫಾ @ ಅಪ್ಪು ಮತ್ತು ಇತರರೊಂದಿಗೆ ಸಮಾನ ಉದ್ದೇಶದಿಂದ ಮಾರಕಾಸ್ತ್ರಗಳೊಂದಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ, ಕೊಲೆಗೆ ಯತ್ನಿಸಿದ್ದಾರೆ ಎಂದು ದೂರು ನೀಡಿದ್ದಾರೆ.
ಈ ಬಗ್ಗೆ ಸುರತ್ಕಲ್ ಪೋಲೀಸರು ಪ್ರಕರಣ ದಾಖಲಿಸಿದ್ದಾರೆ.