ಅಕ್ರಮವಾಗಿ ಸಾಗಿಸುತ್ತಿದ್ದ ದನದ ಮಾಂಸ ವಶ ; ನಾಲ್ವರ ದಸ್ತಗಿರಿ
Posted On:
03-02-2022 05:17PM
ಮಂಗಳೂರು : ಕಾಸರಗೋಡು ಕಡೆಯಿಂದ ಉಳ್ಳಾಲಕ್ಕೆ ಅಕ್ರಮವಾಗಿ ಇಂದು ಬೆಳಿಗ್ಗೆ 7ಗಂಟೆಗೆ ಮಾರುತಿ ಈಕೋ ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ 1 ಕ್ವಿಂಟಲ್ 60 ಕೆ ಜಿ ದನದ ಮಾಂಸವನ್ನು ಪತ್ತೆ ಹಚ್ಚಲಾಗಿದೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಸರಗೋಡು ತಾಲೂಕು ಬಂದ್ಯೋಡು ಎಂಬಲ್ಲಿನ ಮೊಹಮ್ಮದ್ ಎಂಬವರಿಂದ ದನವನ್ನು ಖರೀದಿಸಿ ಅವರ ಮನೆಯಲ್ಲೇ ದನವನ್ನು ಕಡಿದು ಮಾಂಸ ಮಾಡಿ ಉಳ್ಳಾಲಕ್ಕೆ ತಂದು ಯುಸಿ ಇಬ್ರಾಹಿಂ ಕೋಡಿ ಎಂಬವರ ಕೋಡಿ ಮತ್ತು ಮುಕ್ಕಚ್ಚೇರಿಯಲ್ಲಿರುವ ಬೀಫ್ ಸ್ಟಾಲ್ ನಲ್ಲಿ ಮಾರಾಟ ಮಾಡುವುದಾಗಿದೆ.
ಈಕೋ ಕಾರಿನಲ್ಲಿ ದನದ ಮಾಂಸ ಮೂರು ತಲೆಗಳು ದನದ ಚರ್ಮಗಳು ಪತ್ತೆ ಯಾಗಿರುತ್ತದೆ. ಈ ಪ್ರಕಾರಣದಲ್ಲಿ ನಾಲ್ಕು ಜನ ಆರೋಪಿಗಳಾದ ಮಂಗಳೂರಿನ ಚೆಂಬುಗುಡ್ಡೆ ಪೆರ್ಮನ್ನೂರಿನ ಹುಸೇನ್ (24), ಮಂಜಿಲ್ ಕೋಡಿ ಉಳ್ಳಾಲದ ಮಹಮ್ಮದ್ ಮುಜಾಂಬಿಲ್ (25), ಮಂಜಿಲ್ ಕೋಡಿ ಉಳ್ಳಾಲದ ಮಹಮ್ಮದ್ ಅಮೀನ್ (21), ಕೋಡಿ ಉಳ್ಳಾಲದ ಸೋಹೈಬ್ ಅಕ್ತರ್ (22) ದಸ್ತಗಿರಿ ಮಾಡಲಾಗಿದೆ.
ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ಅಂದಾಜು ರೂಪಾಯಿ 3,10,000/- ಆಗಿರುತ್ತದೆ.
ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಹರಿರಾಮ್ ಶಂಕರ್ ಮತ್ತು ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ರವರಾದ ದಿನೇಶ್ ಕುಮಾರ್ ಬಿ ಪಿ ರವರ ಮಾರ್ಗದರ್ಶನದಲ್ಲಿ ನಗರ ಅಪರಾಧ ಪತ್ತೆ ವಿಭಾಗದ ಪೋಲಿಸು ನಿರೀಕ್ಷಕರಾದ ಮಹೇಶ್ ಪ್ರಸಾದ್ ರವರ ನೇತೃತ್ವದಲ್ಲಿ ಪಿ ಎಸ್ ಐ ರಾಜೇಂದ್ರ, ಎ ಎಸ್ ಐ ಮೋಹನ್ ಸಿಬಂದಿಗಳಾದ ಸುಬ್ರಹ್ಮಣ್ಯ ಕೆ. ಎನ್, ಮಣಿ ಎಂ. ಎನ್, ಅಬ್ದುಲ್ ಜಬ್ಬಾರ್, ಸುನಿಲ್ ಕುಮಾರ್ ಹಾಗೂ ಎ ಆರ್ ಎಸ್ ಐ ತೇಜ ಕುಮಾರ್ ಭಾಗವಸಿದ್ದರು.