ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಶ್ರೀ ಬನ್ನಂಜೆ ವರ್ತೆಕಾಳಿ ಕಲ್ಕುಡ ದೈವಸ್ಥಾನ - ಸಿರಿ ಸಿಂಗಾರದ ಕಾಲಾವಧಿ ನೆಮೋತ್ಸವ

Posted On: 05-02-2022 02:50PM

ಉಡುಪಿ : ಜಿಲ್ಲೆಯ ಹಲವಾರು ವರ್ಷಗಳ ವರ್ಷಗಳ ಇತಿಹಾಸವಿರುವ ಶ್ರೀ ಬನ್ನಂಜೆ ವರ್ತೆಕಾಳಿ ಕಲ್ಕುಡ ದೈವಸ್ಥಾನ - ಬನ್ನಂಜೆ ಕಲ್ಕುಡ ಮನೆ , ಉಡುಪಿ ಇಲ್ಲಿ ಫೆಬ್ರವರಿ 8, ಮಂಗಳವಾರದಂದು ರಾತ್ರಿ 9 ಗಂಟೆಯಿಂದ ವರ್ತೆ ಕಲ್ಕುಡ ದೈವಗಳಿಗೆ ಸಿರಿ ಸಿಂಗಾರದ ಕಾಲಾವಧಿ ನೆಮೋತ್ಸವ ಜರಗಲಿದೆ.

ಮಧ್ಯಾಹ್ನ 12 ಗಂಟೆಗೆ ದರ್ಶನ ಸೇವೆ ಹಾಗೂ 12.30ರಿಂದ ಮಹಾಅನ್ನಸಂತರ್ಪಣೆ ಹಾಗೂ ಸಂಜೆ 6 ಗಂಟೆಯಿಂದ ಭಜನೆ ಕಾರ್ಯಕ್ರಮ ಹಾಗೂ 7 ಗಂಟೆಯಿಂದ ದೈವ ದರ್ಶನ ಹಾಗೂ ಹೂವಿನ ಪೂಜೆ ನಡೆಯಲಿದೆ.

ನಮ್ಮ ಉಡುಪಿ ಟಿವಿ ಯುಟ್ಯೂಬ್ ಚಾನೆಲ್ ನಲ್ಲಿ ಸಂಜೆ 6ರಿಂದ ನೆಮೋತ್ಸವದ ನೇರಪ್ರಸಾರವನ್ನು ವೀಕ್ಷಿಸಬಹುದು ಎಂದು ವಿಠಲ್ ಶೆಟ್ಟಿ ಹಾಗೂ ಕುಟುಂಬಸ್ಥರು ಬನ್ನಂಜೆ ಕಲ್ಕುಡ ಮನೆಯವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.