ಪಾಂಗಾಳ : ಫೆಬ್ರವರಿ 15 ರಂದು ವೈಭವದ ಸಿರಿಜಾತ್ರೆ
Posted On:
07-02-2022 10:33PM
ಪಾಂಗಾಳ : ಮುಕ್ಕಾಲಿ ಅಣ್ಣು ಶೆಟ್ಟಿ ಕುಟುಂಬಸ್ಥರ ಆಡಳಿತದ ಶ್ರೀ ಆದಿ ಆಲಡೆ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಂಪ್ರತಿ ಜರಗುವ ವೈಭವದ ಸಿರಿಜಾತ್ರೆಯು ಫೆಬ್ರವರಿ 15, ಮಂಗಳವಾರದಂದು ಜರಗಲಿರುವುದು.
ಅಂದು ಬೆಳಗ್ಗೆ 11 ಗಂಟೆಗೆ ಧ್ವಜಾರೋಹಣದಿಂದ ಪ್ರಾರಂಭಗೊಂಡು ಮಧ್ಯಾಹ್ನ 12-30 ಕ್ಕೆ ಮಹಾಪೂಜೆ , 12-45 ಕ್ಕೆ ಬ್ರಾಹ್ಮಣ ಸುಹಾಸಿನಿ ಆರಾಧನೆ , ಸಾರ್ವಜನಿಕ ಅನ್ನಸಂತರ್ಪಣೆಯು ನಡೆಯಲಿದೆ.
ರಾತ್ರಿ 08:30 ಕ್ಕೆ ಭಂಡಾರ ಚಾವಡಿಯಿಂದ ಪರಿವಾರ ದೈವಗಳ ಭಂಡಾರ ಹೊರಟು ರಾತ್ರಿ 09-30 ಕ್ಕೆ ವೈಭವ್ ಬೈಗಿನ ಬಲಿ ನಡೆಯಲಿರುವುದು.
ರಾತ್ರಿ 11 ಕ್ಕೆ ಕುಮಾರ ದರ್ಶನ , ರಾತ್ರಿ 1 ಕ್ಕೆ ರಂಗಪೂಜೆ , ರಾತ್ರಿ 2:30 ಕ್ಕೆ ಬ್ರಹ್ಮಮಂಡಲ ,ರಾತ್ರಿ 3:30 ಕ್ಕೆ ಭೂತಬಲಿ , ರಾತ್ರಿ 4:30 ರಿಂದ ತುಲಾಭಾರ ಸೇವೆಗಳು ನಡೆಯಲಿದೆ.
ಫೆಬ್ರವರಿ 16, ಬುಧವಾರ ಬೆಳಿಗ್ಗೆ 11ಕ್ಕೆ ಮಹಾಪೂಜೆ ,ಸಂಜೆ 7 ಕ್ಕೆ ತಪ್ಪಂಗಾಯಿ ಬಲಿ , ರಾತ್ರಿ 8:30 ಕ್ಕೆ ದೂಳು ಮಂಡಲ ,ನಂತರ ಭೂತಬಲಿ , ಕವಾಟಬಂಧನ ,ಶಯನೋತ್ಸವ
ಫೆಬ್ರವರಿ 17, ಗುರುವಾರ
ಬೆಳಿಗ್ಗೆ 7ಕ್ಕೆ ಕವಾಟೋದ್ಘಾಟನೆ , ನಂತರ ಮಹಾಪೂಜೆ ,ಸಾಯಂಕಾಲ 5ಕ್ಕೆ ಬಲಿ ಹೊರಟು ಕಟ್ಟೆಪೂಜೆ , ಅವಭೃತ ಸ್ನಾನ ನಡೆದು ಧ್ವಜಾವರೋಹಣಗೊಳ್ಳುವುದರ ಮೂಲಕ ಮೂರು ದಿನಗಳ ಗೌಣೋತ್ಸವು ಸಮಾಪ್ತಿಯಾಗುತ್ತದೆ.
ಭಕ್ತಾದಿಗಳು ಕುಟುಂಬ ಸಮೇತರಾಗಿ ಆಗಮಿಸಿ , ಮಹೋತ್ಸವದಲ್ಲಿ ಭಾಗಿಯಾಗಿ ಶ್ರೀ ಬ್ರಹ್ಮಲಿಂಗೇಶ್ವರ ದೇವರ , ನಾಗದೇವರ ಹಾಗೂ ಶ್ರೀ ಧರ್ಮ ದೈವಗಳ ಕೃಪೆಗೆ ಪಾತ್ರರಾಗಿ ಸಿರಿಮುಡಿ ಗಂಧ ಪ್ರಸಾದ ಸ್ವೀಕರಿಸಿ ಕೃತಾರ್ಥರಾಗಬೇಕಾಗಿ ದೇವಸ್ಥಾನದ ಪತ್ರಿಕಾ ಪ್ರಕಟಣೆಯು ತಿಳಿಸಿದೆ.