ಮಂಗಳೂರು : ಪೆರ್ಮನ್ನೂರು ಗ್ರಾಮದ ಚೆಂಬುಗುಡ್ಡೆ ಎಂಬಲ್ಲಿನ ನಿವಾಸಿ ಫ್ರಾನ್ಸಿಸ್ ಎಂಬವರು ತನ್ನ ವಾಸದ ಮನೆಗೆ ತಾಗಿಕೊಂಡು ತಗಡು ಶೀಟಿನಿಂದ ನಿರ್ಮಿಸಿದ ಕೋಣೆಯಲ್ಲಿ ತುಂಬಿದ ಅಡುಗೆ ಅನಿಲದ (ಡೊಮೆಸ್ಮಿಕ್) ಸಿಲಿಂಡರ್ ನಿಂದ ಖಾಲಿ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಗೆ ತಾನೇ ಕೃತಕವಾಗಿ ರೆಗ್ಯುಲೇಟರ್ ಮುಖೇನ ತುಂಬಿಸಿ ಗಿರಾಕಿಗಳಿಗೆ ಹಣಕ್ಕಾಗಿ ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯಂತೆ ಸಹಾಯಕ ಪೊಲೀಸ್ ಆಯುಕ್ತರು, ಮಂದ,ಉ,ವಿಭಾಗ ರವರ ಮಾರ್ಗದರ್ಶನದಲ್ಲಿ ಮಂಗಳೂರು ಗಿರಾಕಿಗಳಿಗೆ ಹಣಕ್ಕಾಗಿ ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯಂತೆ ಸಹಾಯಕ ಪೊಲೀಸ್ ಆಯುಕ್ತರು, ಮಂ,ಉ,ವಿಭಾಗ ರವರ ಮಾರ್ಗದರ್ಶನದಲ್ಲಿ ಮಂಗಳೂರು ತಾಲೂಕು ಉಳ್ಳಾಲ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಸಂದೀಪ್,ಜಿ.ಎಸ್.ಪೊಲೀಸ್ ಉಪ-ನಿರೀಕ್ಷಕರಾದ ಶಿವಕುಮಾರ್,ಕೆ, ಹಾಗೂ ಸಿಬ್ಬಂದಿಗಳಾದ ಮಹೇಶ, ರೆಜಿ, ಉದಯ, ಸಾಗರ್ ರವರು ಮತ್ತು ಉಳ್ಳಾಲ ವಲಯದ ಆಹಾರ ನಿರೀಕ್ಷಕರಾದ ಹಾರಿಸ್, ಪ್ರಭಾರ ಆಹಾರ ನಿರೀಕ್ಷಕರಾದ ರೇಖ ಹಾಗೂ ಅವರ ತಂಡದವರೊಂದಿಗೆ ಫೆಬ್ರವರಿ 5ರಂದು ಸ್ಥಳಕ್ಕೆ ಗಂಟೆಗೆ ಧಾಳಿ ನಡೆಸಲಾಗಿದೆ.
ಆರೋಪಿ ಫ್ರಾನ್ಸಿಸ್ ಎಂಬಾತನು ಸದ್ರಿ ಕೋಣೆಯಲ್ಲಿ ಖಾಲಿ ಗ್ಯಾಸ್ ಸಿಲಿಂಡರ್‌ನ್ನು ನೆಲದಲ್ಲಿ ಇಟ್ಟು ಅದರ ಮೇಲ್ಗಡೆ ತುಂಬಿದ ಗ್ಯಾಸ್ ಸಿಲಿಂಡರ್‌ನ್ನು ಕವುಚಿ ಹಾಕಿ ಖಾಲಿ ಗ್ಯಾಸ್‌ಸಿಲಿಂಡರ್‌ಗೆ ಪೈಪು ಮುಖೇನ ಕೃತಕವಾಗಿ ತಾನೇ ತುಂಬಿಸುತ್ತಿದ್ದನು ಸ್ಥಳದಿಂದ ಓಡಿ ಪರಾರಿಯಾಗಿದ್ದು, ಸ್ಥಳದಲ್ಲಿ, ದೊರೆತ ವಿವಿಧ ಕಂಪೆನಿಗಳ ಸಣ್ಣ ಹಾಗೂ ದೊಡ್ಡ ಮಾದರಿಯ ಡೊಮೆಸ್ಟಿಕ್ ಹಾಗೂ ಕಮರ್ಷಿಯಲ್ ನ ಗ್ಯಾಸ್ ಒಟ್ಟು ಮೌಲ್ಯ ರೂ.1,92,000 ಹಾಗೂ ಅದಕ್ಕೆ ಸಂಬಂಧಪಟ್ಟ ಪರಿಕರಗಳನ್ನು ವಶಕ್ಕೆ ತೆಗೆದುಕೊಂಡು ಆರೋಪಿ ಫ್ರಾನ್ಸಿಸ್‌ನು ಎಸಗಿದ ಕೃತ್ಯದ ಕುರಿತು ಆಹಾರ ನಿರೀಕ್ಷಕರು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನನ್ವಯ ಉಳ್ಳಾಲ ಠಾಣಾ ಪ್ರಕರಣ ದಾಖಲಾಗಿ ತನಿಖೆಯಲ್ಲಿದೆ. ಆರೋಪಿಯ ಪತ್ತೆಗೆ ಪ್ರಯತ್ನಿಸಲಾಗುತ್ತಿದೆ.