3.48 ಕೋಟಿ ಮೌಲ್ಯದ ಅಂಬರ್ ಗ್ರೀಸ್ ಪತ್ತೆ ಹಚ್ಚಿದ ಮಂಗಳೂರು ನಗರ ಪೊಲೀಸರು
Posted On:
09-02-2022 06:58PM
ಮಂಗಳೂರು : ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟ್ವಾಳ ತಾಲೂಕು ಬಾಳೆಪುಣಿ ಗ್ರಾಮದ ನವೋದಯ ಶಾಲೆಯ ಬಳಿ ನಿಷೇಧಿತ ವಸ್ತುವಾದ ಅಂಬರ್ ಗ್ರೀಸ್ ನ್ನು ಅಕ್ರಮವಾಗಿ ಮಾರಾಟ ಮಾಡಲು ಬಂದ ಬೆಂಗಳೂರು ಮತ್ತು ಉಡುಪಿ ಮೂಲದವರು ಸೇರಿದಂತೆ 6 ಮಂದಿಯನ್ನು ಬಂಧಿಸಿ ಅವರಿಂದ 3.48 ಕೋಟಿ ಮೌಲ್ಯದ 3 ಕೆಜಿ 480 ಗ್ರಾಂ ತೂಕದ ಅಂಬರ್ ಗಿಸ್ ವಶಕ್ಕೆ ಪಡೆಯಲಾಗಿದೆ.
ಬಂಧಿತರು : ಕುಂದಾಪುರದ ಜಡ್ಕಲ್ ಗ್ರಾಮದ ಪ್ರಶಾಂತ್, ಬೆಂಗಳೂರಿನ ವೀರ ಭದ್ರ ನಗರ ಬಿಎಸ್ಕೆಯ ಸತ್ಯರಾಜ್, ಮಂಗಳೂರಿನ ತಂಕೆಡಪದವು ಗ್ರಾಮದ ರೋಹಿತ್, ಮಂಗಳೂರಿನ ಅಡೂರು ಗ್ರಾಮದ ರಾಜೇಶ್, ಮಂಗಳೀರಿನ ತಂಕಎಡಪದವು ಗ್ರಾಮದ ವಿರುಪಾಕ್ಷ, ಮಲಾರ್ ಕಾಪು ಗ್ರಾಮದ ನಾಗರಾಜ್
ಈ ಅಂಬರ್ ಗ್ರೀಸ್ ನ್ನು ತಮಿಳುನಾಡು ಮೂಲದ ಮೀನುಗಾರ ಸೇದು ಮಾಣಿಕ್ಯ ಎಂಬುವರು ನೀಡಿದ್ದಾಗಿ ತಿಳಿಸಿರುತ್ತಾರೆ.
ಈ ಕಾರ್ಯಾಚರಣೆಯನ್ನು ಸಹಾಯಕ ಪೊಲೀಸ್ ಆಯುಕ್ತರಾದ ದಿನಕರ ಶೆಟ್ಟಿರವರ ಮಾರ್ಗದರ್ಶನದಲ್ಲಿ ಕೊಣಾಜೆ ಪೊಲೀಸ್ ನಿರೀಕ್ಷಕರಾದ ಪ್ರಕಾಶ್ ದೇವಾಡಿಗರವರ ಮುಂದಾಳತ್ಯದಲ್ಲಿ, ಉಪ-ನಿರೀಕ್ಷಕರಾದ ಶರಣಪ್ಪ ಭಂಡಾರಿ ಮತ್ತು ಮಲಿಕಾರ್ಜುನ್ ಬಿರಾದಾರ್ ಎ.ಎಸ್.ಐರವರಾದ ಮೋಹನ್ ದೇರಳಕಟ್ಟೆ, ಸಂಜೀವ ಸಿಬ್ಬಂದಿಗಳಾದ ಅಶೋಕ್, ಶಿವಕುಮಾರ್ ಪುರುಶೋತ್ತಮ, ದೀಪಕ್, ಅಂಬರೀಷ್ ಘಂಟಿ, ಭರಮಾ ಬಡಿಗೇರ್ ರವರುಗಳು ಆರೋಪಿಗಳ ಪತ್ತೆ ಕಾರ್ಯದಲ್ಲಿ ಭಾಗವಹಿಸಿರುತ್ತಾರೆ.