ನಿರ್ಲಕ್ಷ್ಯತನದ ಚಾಲನೆ ಸ್ಕೂಟರ್ ಸವಾರನಿಗೆ ಗಂಭೀರ ಗಾಯ
Posted On:
11-02-2022 11:17PM
ಮೂಡಬಿದ್ರಿ : ಇಲ್ಲಿನ ವಿದ್ಯಾಗಿರಿ ಎಂಬಲ್ಲಿ ಮೂಲ್ಕಿ ಕ್ರಾಸ್ ರಸ್ತೆಯ ಬಳಿ ಕಾರಿನ ನಿರ್ಲಕ್ಷ್ಯತನದ ಚಾಲನೆಯದ ಸ್ಕೂಟರ್ ಸವಾರನಿಗೆ ಗಂಭೀರ ಗಾಯಗೊಂಡ ಘಟನೆ ಫೆಬ್ರವರಿ 9ರಂದು ನಡೆದಿದೆ.
ಚಾಲಕ ಕಾರನ್ನು ಮೂಡಬಿದ್ರೆ ಕಡೆಯಿಂದ ಚಲಾಯಿಸಿಕೊಂಡು ಬಂದು ಮೂಲ್ಕಿ ಕ್ರಾಸ್ ರಸ್ತೆಗೆ ತಿರುಗಿಸಿ ನಂತರ ಏಕಾಏಕಿಯಾಗಿ ಪುನಃ ಮಂಗಳೂರು ಕಡೆಗೆ ಹೋಗುವ ರಸ್ತೆಗೆ ನಿರ್ಲಕ್ಷ್ಯತನದಿಂದ ತಿರುಗಿಸಿದ ಪರಿಣಾಮ ಮಂಗಳೂರು ಕಡೆಯಿಂದ ಸ್ಕೂಟರ್ನಲ್ಲಿ ಬರುತ್ತಿದ್ದ ಸಹೋದರರಾದ ಮೊಹಮ್ಮದ್ ರಿಜ್ವಾನ್ ಮತ್ತು ಮೊಹಮ್ಮದ್ ಸಾಹುಲ್ ಹಮೀದ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮೊಹಮ್ಮದ್ ಸಾಹುಲ್ ಹಮೀದ್ ನಿಗೆ ಎರಡು ಕೈಗಳಿಗೆ ಮೂಳೆ ಮುರಿತದ ಗಾಯಗಳಾಗಿರುವುದು ಅಲ್ಲದೇ ದೇಹದ ಭಾಗಗಳಿಗೂ ಗಾಯವಾಗಿದೆ.
ಗಾಯಾಳುವನ್ನು ಚಿಕಿತ್ಸೆಗಾಗಿ ಮೂಡಬಿದ್ರೆಯ ಆಳ್ವಾಸ್ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೂಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.