ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಇನ್ನಂಜೆ : 14ನೇ ಶತಮಾನದ ಶಿಲಾಶಾಸನ ಪತ್ತೆ

Posted On: 27-02-2022 10:00PM

ಕಾಪು : ಇನ್ನಂಜೆ ಗ್ರಾಮದ ಕುಂಜಾರ್ಗ ಪ್ರಭು ಕುಟುಂಬದ ಬ್ರಹ್ಮಸ್ಥಾನದ ಪಶ್ಚಿಮದಲ್ಲಿರುವ ಗದ್ದೆಯಲ್ಲಿ ಶಿಲಾಶಾಸನವೊಂದು ಪತ್ತೆಯಾಗಿದೆ.

ಈ ಶಿಲಾಶಾಸನವು ವಿಜಯನಗರದರಸರ ಕಾಲದ್ದು ಎನ್ನಲಾಗಿದ್ದು, ಪುರಾತತ್ವ ಶಾಸನಗಳ ಸಂಶೋಧಕ ಅಧ್ಯಯನ ತಜ್ಞರಾದ ಸುಭಾಸ್ ನಾಯಕ್ ಬಂಟಕಲ್ಲು ಅವರು ಇದರ ಬಗ್ಗೆ ಮಾಹಿತಿ ನೀಡಿದ್ದಾರೆ.

ಈ ಶಿಲಾಶಾಸನದಲ್ಲಿ 14ನೇ ಶತಮಾನದ (1356-1377)ಬುಕ್ಕರಾಯನ ಹೆಸರು ಉಲ್ಲೇಖಿತ ಆಗಿದೆ. ಕೊನೆಯಲ್ಲಿ 'ಅರಸಿಂಗೆ ಗದ್ಯಾಣ ನೂರು ಹೊನ್ನು' ಕೊಟ್ಟ ಉಲ್ಲೇಖ. ಕೊನೆಯಲ್ಲಿ ಶಾಪಾಶಯ ಶಾಸನ ಹಾಳು ಮಾಡಿದವನಿಗೆ ವಾರಣಾಸಿಯಲ್ಲಿ ಗೋವುಗಳನ್ನು ಕೊಂದ ಪಾಪ. ಅವರ ಮಗ, ಆತನ ಮಗ ಇತ್ಯಾದಿ ಉಲ್ಲೇಖಿತವಾಗಿದೆ. ಒಂದಿಷ್ಟು ಪದಗಳು ಸಿಕ್ಕರೂ ಅಕ್ಷರಗಳು ನಶಿಸಿ ಹೋಗಿರುವುದರಿಂದ ಸಂಪೂರ್ಣ ಓದಲು ಸಾಧ್ಯವಿಲ್ಲದಾಗಿದೆ.