ಕಾಪು : ಜೆಸಿಐ ಕಾಪು, ಜೇಸಿ ಮಹಿಳಾ ವಿಂಗ್, ಜೂನಿಯರ್ ಜೇಸಿ ವಿಂಗ್ ಆಶ್ರಯದಲ್ಲಿ ತರಕಾರಿ ಕೃಷಿ ಬಗ್ಗೆ ಮಾಹಿತಿ ಹಾಗೂ ಬೃಹತ್ ಸೌತೆಕಾಯಿ ನೇರ ಮಾರಾಟ ಕಾರ್ಯಕ್ರಮವು ಮಾಚ್೯ 6, ಆದಿತ್ಯವಾರ ಇನ್ನಂಜೆಯ ಉದಯ ಜಿ ಇವರ ಮನೆ ಅನುಗ್ರಹ ಇಲ್ಲಿ ಜರಗಲಿದೆ.
ಮುಖ್ಯ ಅತಿಥಿಗಳಾಗಿ ಇನ್ನಂಜೆ ಗ್ರಾಮಪಂಚಾಯತ್ ಅಧ್ಯಕ್ಷರಾದ ಮಲ್ಲಿಕಾ ಆಚಾರ್ಯ,
ಗೌರವ ಉಪಸ್ಥಿತಿಯಾಗಿ ಇನ್ನಂಜೆಯ ಕೃಷಿಕರಾದ ಕರಿಯ ಮೂಲ್ಯ, ಸಂಪನ್ಮೂಲ ವ್ಯಕ್ತಿಯಾಗಿ ಕಳತ್ತೂರಿನ ಕೃಷಿಕರಾದ ಶಾರದೇಶ್ವರೀ ಗುರ್ಮೆ, ಇನ್ನಂಜೆಯ ಕೃಷಿಕರಾದ ಉದಯ ಟಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.