ಕಾಪು : ಕೆಎಸ್ಟಿಎ ಕ್ಷೇತ್ರ ಸಮಿತಿ ಕಾಪು ವತಿಯಿಂದ ಮಾಚ್೯ 7ರಂದು ಟೈಲರ್ಸ್ ಡೇ ಕಾರ್ಯಕ್ರಮವು ಕಾಂಚನ್ ಮೂಲಸ್ಥಾನ ಸಭಾ ಭವನ ಕಾಪು ಇಲ್ಲಿ ಜರಗಿತು.
ಕಾರ್ಯಕ್ರಮವನ್ನು ಕೆಎಸ್ಟಿಎ ರಾಜ್ಯ ಸಮಿತಿಯ ಸಂಘಟನಾ ಕಾರ್ಯದರ್ಶಿಯಾದ ಅಬ್ದುಲ್ ಖಾದರ್ ಉದ್ಘಾಟಿಸಿದರು.
ಕಾಪು ಕ್ಷೇತ್ರ ಸಮಿತಿಯ ಬಿ. ಕೆ. ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾಧ್ಯಕ್ಷರಾದ ಗುರುರಾಜ್ ಶೆಟ್ಟಿ ಉಡುಪಿ, ರಾಜ್ಯ ಸಮಿತಿಯ ಕೋಶಾಧಿಕಾರಿ ರಾಮಚಂದ್ರ ಉಡುಪಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಪಾಲನ್, ಜಿಲ್ಲಾ ಸಮಿತಿಯ ಮಾಜಿ ಅಧ್ಯಕ್ಷ ವಿಲಿಯಮ್ ಮಚಾದೋ, ಕ್ಷೇತ್ರ ಸಮಿತಿಯ ಮಾಜಿ ಅಧ್ಯಕ್ಷ ಆನಂದ ಪುತ್ರನ್, ಕ್ಷೇತ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಮೃತಾಕ್ಷಿ ಶೆಟ್ಟಿ, ಕೆಎಸ್ಟಿಎ ಕಾಪು ಕ್ಷೇತ್ರ ಸಮಿತಿಯ ಉಪಾಧ್ಯಕ್ಷರಾದ ರಮಾನಂದ್ ಬೆಳ್ಮಣ್, ಕೋಶಾಧಿಕಾರಿ ಸುರೇಶ್ ಶೆಟ್ಟಿಗಾರ್, ಪಡುಬಿದ್ರಿ ವಲಯದ ಅಧ್ಯಕ್ಷೆ ಮೋಹಿನಿ ಕುಂದರ್ , ಕಾಪು ವಲಯದ ಅಧ್ಯಕ್ಷೆ ಮೋಹಿನಿ ಸುವರ್ಣ, ಬೆಳ್ಮಣ್ ವಲಯದ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್, ಶಿರ್ವ ವಲಯದ ಅಧ್ಯಕ್ಷ ಶ್ರೀನಿವಾಸ್ ಆಚಾರ್ಯ, ಕಟಪಾಡಿ ವಲಯದ ಅಧ್ಯಕ್ಷ ಶಾಹಿನಾ ಬೇಗಂ ಉಪಸ್ಥಿತರಿದ್ದರು.
ಕಾಪು ಕ್ಷೇತ್ರ ವಲಯ ಸಮಿತಿ ವತಿಯಿಂದ 50 ಜನ ಹಿರಿಯ ಸದಸ್ಯರಿಗೆ ಗೌರವಿಸಿ ಧನಸಹಾಯ ನೀಡಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮವು ಜರಗಿತು.
ಬಿ. ಕೆ ಶ್ರೀನಿವಾಸ್ ಪ್ರಾರ್ಥಿಸಿ, ಯೋಗೀಶ್ ಪಡುಬಿದ್ರಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.