ಹೆಜಮಾಡಿ : ಅವರಾಲು ಶ್ರೀ ಧೂಮಾವತಿ ದೈವಸ್ಥಾನದ ವರ್ಷಾವಧಿ ನೇಮೋತ್ಸವವು ಮಾಚ್೯ 29 ಮತ್ತು 30 ರಂದು ಜರಗಲಿದೆ.
ಮಾಚ್೯ 29ರಂದು ಬೆಳಿಗ್ಗೆ ಗಂಟೆ 9 ಕ್ಕೆ ಸ್ಥಳ ಶುದ್ಧಿ, ನವಕ ಕಲಶಾಭಿಷೇಕ, ಗಂಟೆ 11ಕ್ಕೆ ಚಪ್ಪರ ಆರೋಹಣ, ಮಧ್ಯಾಹ್ನ 1ಕ್ಕೆ ಅನ್ನಸಂತರ್ಪಣೆ, ಸಂಜೆ ಗಂಟೆ 6ಕ್ಕೆ ಭಂಡಾರ ಇಳಿಯುವುದು, ರಾತ್ರಿ 8ಕ್ಕೆ ಅನ್ನಸಂತರ್ಪಣೆ, ರಾತ್ರಿ 10ರಿಂದ ಗಡುವಾಡು ಸ್ಥಳದಲ್ಲಿ ಶ್ರೀ ಉಳ್ಳಾಯ, ಕೊಡಮಣಿತ್ತಾಯ, ಜಾರಂದಾಯ ಹಾಗೂ ಬಂಟ ದೈವಗಳ ನೇಮೋತ್ಸವ ಜರಗಲಿದೆ.
ಮಾಚ್೯ 30 ರಂದು ರಾತ್ರಿ 7ಕ್ಕೆ ಆದಿ ಜನಾರ್ಧನ ಮಕ್ಕಳ ಕುಣಿತ ಭಜನಾ ಮಂಡಳಿ ಶಿಮಂತೂರು ಇವರ ವತಿಯಿಂದ ಕುಣಿತ ಭಜನಾ ಕಾರ್ಯಕ್ರಮ, ರಾತ್ರಿ 8ಕ್ಕೆ ಅನ್ನಸಂತರ್ಪಣೆ, ರಾತ್ರಿ 10ರಿಂದ ಶ್ರೀ ಧೂಮಾವತಿ ಬಂಟ ದೈವಗಳ ನೇಮೋತ್ಸವ ಜರಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.