ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಪಾಂಗಾಳ ಗುಡ್ಡೆ ಬ್ರಹ್ಮ ಬೈದೇರುಗಳ ಗರಡಿಯಲ್ಲಿ ಹರಕೆಯ ಹೂವಿನ ಪೂಜೆ ಸಲ್ಲಿಸಿದ ಸಚಿವ ಸುನೀಲ್ ಕುಮಾರ್

Posted On: 27-03-2022 10:38PM

ಕಟಪಾಡಿ : ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಇಂಧನ ಇಲಾಖೆಯ ಸಚಿವರಾದ ಸುನೀಲ್ ಕುಮಾರ್ ಹಾಗೂ ಅವರ ಕುಟುಂಬಸ್ಥರು ಮಾಚ್೯ 27 ರಂದು ಪಾಂಗಾಳ ಗುಡ್ಡೆ ಬ್ರಹ್ಮ ಬೈದೇರುಗಳ ಗರಡಿಯಲ್ಲಿ ಹರಕೆಯ ಹೂವಿನ ಪೂಜೆಯನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಜಯ ಡಿ ಅಮೀನ್, ಶೇಖರ್ ಜಿ ಅಮೀನ್, ಸುಧಾಕರ್ ಡಿ ಅಮೀನ್, ಗರಡಿಯ ಚಾಕರಿ ವರ್ಗ, ಪಕ್ಷದ ಪ್ರಮುಖರು, ಮತ್ತಿತರರು ‌ಉಪಸ್ಥಿತರಿದ್ದರು.