ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಬ್ರಹ್ಮಶ್ರೀ ನಾರಾಯಣಗುರು ಭಜನಾ ಮಂದಿರ ಪಡುಕರೆ : 86ನೇ ವಾರ್ಷಿಕ ಮಂಗಲೋತ್ಸವ

Posted On: 28-03-2022 10:49PM

ಉಡುಪಿ : ಬ್ರಹ್ಮಶ್ರೀ ನಾರಾಯಣಗುರು ಭಜನಾ ಮಂದಿರ (ರಿ.) ಪಡುಕರೆ ಇದರ 86ನೇ ವಾರ್ಷಿಕ ಮಂಗಲೋತ್ಸವವು ಮಾಚ್೯ 28 ರಿಂದ ಏಪ್ರಿಲ್ 03 ರವರೆಗೆ ಜರಗಲಿದೆ.

ಮಾಚ್೯ 28 ರಿಂದ ಏಪ್ರಿಲ್ 03 ರವರೆಗೆ ಪ್ರತಿದಿನ ರಾತ್ರಿ ಮಂದಿರದಲ್ಲಿ ಭಜನೆ ಜರಗಲಿದ್ದು, ಏಪ್ರಿಲ್ 3ರಂದು ಸಂಜೆ 6 ರಿಂದ ಕಲಶಪ್ರತಿಷ್ಠೆಯಾಗಿ ಭಜನೆ, ರಾತ್ರಿ 9.30ಕ್ಕೆ ಮಹಾಮಂಗಲೋತ್ಸವ ತದನಂತರ ಗುರುಪೂಜೆ, ಪ್ರಸಾದ ವಿತರಣೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.