ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಏಪ್ರಿಲ್ 1 : ಶಿವದೂತೆ ಗುಳಿಗೆ ಯಶಸ್ಸಿನ ಬಳಿಕ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಇವರ ಮತ್ತೊಂದು ತುಳು ನಾಟಕ ಮಣಿಕಂಠ ಮಹಿಮೆ ಉಡುಪಿಯಲ್ಲಿ ಪ್ರಥಮ ಪ್ರದರ್ಶನ

Posted On: 28-03-2022 11:23PM

ಉಡುಪಿ : ತುಳುನಾಡು ಅಲ್ಲದೇ ಬೇರೆ ಬೇರೆ ಕಡೆಯಲ್ಲಿ ಅದ್ಭುತ ಪ್ರದರ್ಶನ ನೀಡಿರುವ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಇವರ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಶಿವದೂತೆ ಗುಳಿಗೆ ತಂಡದಿಂದ ಮತ್ತೊಂದು ಸಂಚಲನ ಮೂಡಿಸುವ ತುಳು ನಾಟಕ ಮಣಿಕಂಠ ಮಹಿಮೆ ರೋಯಲ್ ಫ್ರೆಂಡ್ಸ್, ಮಲ್ಪೆ-ಉಡುಪಿ ಪ್ರಾಯೋಜಕತ್ವದಲ್ಲಿ ಉಡುಪಿ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಉಡುಪಿಯ ಅಜ್ಜರಕಾಡುವಿನಲ್ಲಿರುವ ಉಡುಪಿ ಪುರಭವನದಲ್ಲಿ ಏಪ್ರಿಲ್‌ 1 ರಂದು ಸಂಜೆ 6:30ಕ್ಕೆ ಪ್ರಥಮ ಪ್ರದರ್ಶನವಾಗಲಿದೆ.

ವಿಜಯಕುಮಾರ್ ಕೊಡಿಯಾಲ್ ಬೈಲ್ ರಚಿಸಿ ನಿರ್ದೇಶಿಸಿರುವ ತುಳು ನಾಟಕ ಮಣಿಕಂಠ ಮಹಿಮೆಯ ಟಿಕೇಟಿಗಾಗಿ ಸಂಪರ್ಕಿಸಿ : +91 9611649910, +91 9743247113