ಮಣಿಪಾಲ : ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು ಎರಡೂವರೆ ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನದ ಸರವು ಮಾಚ್೯ 31ರ ಬೆಳಿಗ್ಗೆ ಮಣಿಪಾಲ ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷರಾದ ಸುದೇಶ್ ನಾಯ್ಕ ಇವರಿಗೆ ಸಿಕ್ಕಿರುತ್ತದೆ.
ಆ ಚಿನ್ನದ ಸರವನ್ನು ನಿಜವಾದ ವಾರಸುದಾರರಿಗೆ ಮರಳಿಸುವ ಮೂಲಕ ಮಾನವೀಯತೆಯನ್ನು ಮೆರೆದಿರುತ್ತಾರೆ. ಚಿನ್ನದ ಸರದ ವಾರಸುದಾರರು ಇವರ ಕಾರ್ಯಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿರುತ್ತಾರೆ.