ಕಲ್ಯಾಣಪುರ ರೋಟರಿ ಪ್ರಾಯೋಜಕತ್ವದಲ್ಲಿ ಕೆಮ್ಮಣ್ಣು ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಪೈಂಟಿಂಗ್
Posted On:
01-04-2022 02:55PM
ಉಡುಪಿ :ಸರ್ಕಾರಿ ಪದವಿಪೂರ್ವ ಕಾಲೇಜು, ಕೆಮ್ಮಣ್ಣು ಇದರ ಕಟ್ಟಡಕ್ಕೆ ಆಂಶಿಕವಾಗಿ ಇತ್ತೀಚೆಗೆ ಪೈಂಟಿಂಗ್ ಕೆಲಸವನ್ನು ಕಲ್ಯಾಣಪುರ ರೋಟರಿ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಮಾಡಿ ಕೊಡಲಾಯಿತು.
ಇದರ ಹಸ್ತಾಂತರವನ್ನು ರೋಟರಿ ಕಲ್ಯಾಣಪುರದ ಅಧ್ಯಕ್ಷರಾದ ಶಂಭು ಶಂಕರ್, ಕಾರ್ಯದರ್ಶಿ ಪ್ರಕಾಶ್ , ವಲಯ ಸೇನಾನಿ ಬ್ರಯಾನ್ ಡಿಸೋಜ ಮತ್ತಿತರ ರೋಟರಿ ಪದಾಧಿಕಾರಿಗಳು ,ಕಾಲೇಜಿನ ಪ್ರಾಂಶುಪಾಲರಾದ ಲಕ್ಷ್ಮಿ ನಾರಾಯಣ ಎಸ್. ವಿ. ಮತ್ತು ಉಪನ್ಯಾಸಕರಾದ ಕ್ಸೇವಿಯರ್ ರವರು ಉಪಸ್ಥಿತಿಯಲ್ಲಿ ನೆರವೇರಿಸಲಾಯಿತು.
ಕಾಲೇಜಿನ ಪ್ರಾಂಶುಪಾಲರು ಸಂಸ್ಥೆಯ ಅವಶ್ಯಕ ಬೇಡಿಕೆಗೆ ಸ್ಪಂದಿಸಿ, ಪೂರೈಸಿದ ರೋಟರಿ ಕ್ಲಬ್ ನ ಸೇವೆಯನ್ನು ಶ್ಲಾಘಿಸಿ ವಂದಿಸಿದರು.