ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಜಾನಪದ ವಿದ್ವಾಂಸ ಕೆ.ಎಲ್. ಕುಂಡಂತಾಯರ ದೈವಾರಾಧನೆಯ ಕುರಿತ ನಡುವಣ ಲೋಕದ ನಡೆ ಕೃತಿ ಬಿಡುಗಡೆ

Posted On: 02-04-2022 09:00AM

ಎಲ್ಲೂರು : ಇಲ್ಲಿಯ ಕುಂಜೂರು ಶ್ರೀದುರ್ಗಾ ದೇವಸ್ಥಾನದಲ್ಲಿ ಕೆ.ಎಲ್.ಕುಂಡಂತಾಯರ ದೈವ - ಬೂತಾರಾಧನೆಯ ಕುರಿತ ಲೇಖನಗಳ ಸಂಗ್ರಹ 'ನಡುವಣ ಲೋಕದ ನಡೆ' ದೈವಾರಾಧನೆಯ ನೆಲೆ - ಕಲೆ ಬಿಡುಗಡೆಗೊಂಡಿತು.

ಜಾನಪದ ವಿದ್ವಾಂಸ ಡಾ.ವೈ.ಎನ್ .ಶೆಟ್ಟಿ ಹಾಗೂ‌ ಸಾಮಾಜಿಕ ಕಾರ್ಯಕರ್ತ ಸುರೇಶ ಶೆಟ್ಟಿ ಗುರ್ಮೆ 'ನಡುವಣ ಲೋಕದ ನಡೆ'ಯನ್ನು ಬಿಡುಗಡೆಗೊಳಿಸಿದರು. ಸಾಹಿತಿ,ಲೇಖಕ ಡಾ.ಜನಾರ್ದನ ಭಟ್ ಕೃತಿಯನ್ನು ಪರಿಚಯಿಸಿದರು.

ಜಾನಪದ ವಿದ್ವಾಂಸ ಡಾ.ಅಶೋಕ ಆಳ್ವ, ಉದ್ಯಮಿ ನಾರಾಯಣ ಕೆ.ಶೆಟ್ಟಿ, ನಡಿಮನೆ ದೇವರಾಜ ರಾವ್, ನಿವೃತ್ತ ಪ್ರಾಂಶುಪಾಲ ಸುದರ್ಶನ ವೈ.ಎಸ್, ದೇವಳದ ಮ್ಯಾನೇಜರ್ ರಾಘವೇಂದ್ರ ಶೆಟ್ಟಿ ಹಾಗೂ ಕೆ.ಎಲ್.ಕುಂಡಂತಾಯ ಉಪಸ್ಥಿತರಿದ್ದರು.