ಕಾಪು : ಮಾತು...ಕಥೆ ಕಿರುಚಿತ್ರ ಬಿಡುಗಡೆ
Posted On:
03-04-2022 06:03PM
ಕಾಪು, ಏ.3 : ಈಶಾನ್ಯ ಕ್ರಿಯೇಷನ್ಸ್ ಅರ್ಪಿಸುವ ಎಸ್- ಟೀಮ್ ಪ್ರಸ್ತುತಪಡಿಸುವ ಸತ್ಯ ಘಟನೆ ಆಧಾರಿತ ಕಿರುಚಿತ್ರ ಮಾತು... ಕಥೆ ಜೆಸಿಐ ಭವನ ಕಾಪು ಇಲ್ಲಿ ಬಿಡುಗಡೆಗೊಂಡಿತು.
ಮುಖ್ಯ ಅತಿಥಿಗಳಾಗಿ ಕಾಪುವಿನ ಈಶಾನ್ಯ
ಕನ್ಸ್ ಸ್ಟ್ರಕ್ಷನ್ ನ ಪ್ರಸಾದ್ ಪಾದೂರು, ಸಂಗೀತ ನಿರ್ದೇಶಕ ಲಾಯ್ ವ್ಯಾಲೆಂಟೈನ್ ಸಲ್ಡಾನ್ಹಾ, ರಂಗನಟ, ನಿರ್ದೇಶಕ ದಿವಾಕರ್ ಕಟೀಲ್, ಕಾಪು ಕಾಳಿಕಾಂಬ ದೇವಸ್ಥಾನದ ಆಡಳಿತ ಮೊಕ್ತೇಸರ ಶೇಖರ ಆಚಾರ್ಯ, ದಿನೇಶ್ ಆಚಾರ್ಯ, ಶ್ರೀಕಾಂತ್ ಆಚಾರ್ಯ ಉಪಸ್ಥಿತರಿದ್ದರು.
ಮಾತು... ಕಥೆ ಕಿರುಚಿತ್ರದಲ್ಲಿ ವಿಕಾಸ್ ಕೆ ಇವರ ಚಿತ್ರಕಥೆ, ಸಂಕಲನ, ನಿರ್ದೇಶನವಿದ್ದು, ಪ್ರದೀಪ್ ನಾಯಕ್, ಧೀರಜ್ ಭಟ್ ಛಾಯಾಗ್ರಹಣ, ಸೃಜನ್ ಕುಮಾರ್ ತೋನ್ಸೆ ಸಂಗೀತವಿದೆ. ಕಲಾವಿದರಾಗಿ ಅವಿನಾಶ್ ರೈ, ಸಂದೀಪ್ ಬಂಟ್ವಾಳ ನಟಿಸಿದ್ದಾರೆ.
ಎಸ್- ಟೀಮ್ ಇವೆಂಟ್ಸ್ ಕಾಪು ಕಾರ್ಯಕ್ರಮ ಸಂಯೋಜಿಸಿ, ದೂರದರ್ಶನ ಕಾರ್ಯಕ್ರಮ ನಿರೂಪಕ ಎನ್ ಆರ್ ದಾಮೋದರ ಶರ್ಮ ಕಾರ್ಯಕ್ರಮ ನಿರೂಪಿಸಿದರು.