ಕಾಪು : ಉಂಡಾರು ಶ್ರೀ ವಿಷ್ಣುಮೂರ್ತಿ ದೇವಳದ ವಾರ್ಷಿಕ ಜಾತ್ರಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಸಂದರ್ಭ ದೇವಳದ ಮುಂಭಾಗ ಇಂಟರ್‌ಲಾಕ್ ಸೌಲಭ್ಯ ಮಂಜೂರು ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆಯವರನ್ನು ಸೋದೆ ಮಠದ ಶ್ರೀಗಳಾದ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಸನ್ಮಾನಿಸಿದರು.
ಈ ಸಂದರ್ಭ ಲೀಲಾಧರ ಶೆಟ್ಟಿ ಕರಂದಾಡಿ, ಚಂದ್ರಹಾಸ ಗುರುಸ್ವಾಮಿ, ಅಣ್ಣಪ್ಪ ಸೌಂಡ್ಸ್ ನ ಉದಯ್ ಶೆಟ್ಟಿ, ಡಾ.ಗಣೇಶ್ ಶೆಟ್ಟಿ, ರವಿವರ್ಮ ಶೆಟ್ಟಿ ಇನ್ನಂಜೆ, ನವೀನ್ ಅಮೀನ್ ಶಂಕರಪುರ, ಮಾಲಿನಿ ಪಾರ್ಥ ಇನ್ನಂಜೆ, ದಿವೇಶ್ ಶೆಟ್ಟಿ ಇನ್ನಂಜೆ, ನಿತೇಶ್ ಸಾಲ್ಯಾನ್ ಕಲ್ಯಾಲು, ಆಶಾ ನಾಯಕ್, ಲಕ್ಷ್ಮೀ ಮತ್ತಿತರರು ಉಪಸ್ಥಿತರಿದ್ದರು.