ಪಡುಬಿದ್ರಿ : ಇಲ್ಲಿನ ಬಿಲ್ಲವ ಸಮಾಜ ಸೇವಾ ಸಂಘದ ಬ್ರಹ್ಮಶ್ರೀ ನಾರಾಯಣಗುರು ಸ್ವಾಮೀಜಿಯವರ ಗುರುಮೂರ್ತಿ ಪ್ರತಿಷ್ಠಾ ವರ್ಧಂತಿಯ ಪ್ರಯುಕ್ತ ಶನಿವಾರ ನಾರಾಯಣಗುರು ಮಂದಿರದಲ್ಲಿ ಧಾರ್ಮಿಕ ಕಾರ್ಯ, ಭಜನಾ ಕಾರ್ಯಕ್ರಮ ಜರಗಿತು.
ಪಡುಬಿದ್ರಿ ನಾರಾಯಣಗುರು ಮಹಿಳಾ ಮಂಡಳಿ, ಕಲ್ಲಟ್ಟೆ ಶ್ರೀ ಜಾರಂದಾಯ ಭಜನಾ ಮಂಡಳಿ, ಶ್ರೀ ದುರ್ಗಾ ಹೆಜಮಾಡಿ ಮಹಿಳಾ ಮಂಡಳಿ, ಗಾಯತ್ರಿ ಭಜನಾ ಮಹಿಳಾ ಮಂಡಳಿ ಪಾದೆಬೆಟ್ಟು, ಬ್ರಹ್ಮಶ್ರಿ ಭಜನಾ ಮಂಡಳಿ ಎರ್ಮಾಳು, ಅವರಾಲು ಭಜನಾ ಮಂಡಳಿ, ಉದಯಾದ್ರಿ ಮಹಿಳಾ ಭಜನಾ ಮಂಡಳಿ ಮತ್ತು ಶ್ರವಣ್ ಕುಮಾರ್ ತಂಡದಿಂದ ಕುಣಿತ ಭಜನಾ ಕಾರ್ಯಕ್ರಮ ಜರಗಿತು.
ಈ ಸಂದರ್ಭದಲ್ಲಿ ಬಿಲ್ಲವ ಸಂಘದ ಅಧ್ಯಕ್ಷರಾದ ವೈ ಸುಧೀರ್ ಕುಮಾರ್, ಕಾರ್ಯದರ್ಶಿ ಲಕ್ಷ್ಮಣ್ ಡಿ ಪೂಜಾರಿ, ಕೋಶಾಧಿಕಾರಿ ಅಶೋಕ್ ಪೂಜಾರಿ, ಮಹಿಳಾ ವಿಭಾಗದ ಅಧ್ಯಕ್ಷೆ ಸುಚರಿತ ಎಲ್. ಅಮೀನ್, ನಾರಾಯಣಗುರು ಸೇವಾದಳದ ದಳಪತಿ ಯೋಗೀಶ್ ಪೂಜಾರಿ ಮಾದುಮನೆ, ಅರ್ಚಕರಾದ ಚಂದ್ರಶೇಖರ ಶಾಂತಿ, ಯೋಗೀಶ್ ಶಾಂತಿ, ರವಿರಾಜ್ ಎನ್ ಕೋಟ್ಯಾನ್, ಉಮೇಶ್, ಲೀಲಾಧರ್, ವಿರೇಂದ್ರ, ರಮಾನಂದ, ಚಿತ್ರಾಕ್ಷಿ ಕೆ ಕೋಟ್ಯಾನ್, ಸುಗಂಧಿ, ಆನಂದ, ಬಿಲ್ಲವ ಸಂಘದ ಪದಾಧಿಕಾರಿಗಳು, ಸದಸ್ಯರು, ಮಹಿಳಾ ಮಂಡಳಿಯ ಸದಸ್ಯರು, ಸೇವಾದಳದ ಸದಸ್ಯರು ಉಪಸ್ಥಿತರಿದ್ದರು.