ಉಡುಪಿ : ಬ್ರಹ್ಮಾವರ ಗಾಂಧಿ ಮೈದಾನದಲ್ಲಿ ಟೀಮ್ ಡ್ಯೂಡ್ ಆಶ್ರಯದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ನಡೆದ ಪಂದ್ಯಕೂಟ ಏಪ್ರಿಲ್ 8 ಮತ್ತು 9ರಂದು ಡ್ಯೂಡ್ ಟ್ರೋಫಿ ಜರಗಿತು.
ಪಂದ್ಯಕೂಟದಲ್ಲಿ ಸಂಗ್ರಹವಾದ ಮೊತ್ತದಿಂದ ಉಳಿತಾಯದ ಹಣದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೇರೂರು ಇಲ್ಲಿನ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲು ಕಂಪ್ಯೂಟರ್ ನೀಡಲಾಯಿತು.
ಈ ಸಂದರ್ಭ ನಿತ್ಯಾನಂದ ಪೂಜಾರಿ, ಸಚಿನ್ ಪೂಜಾರಿ , ದೀಕ್ಷಿತ್ ಪೂಜಾರಿ, ರಾಘವೇಂದ್ರ ಶೆಟ್ಟಿಗಾರ್, ಡ್ಯೂಡ್ ಮಾಲಕರದ ಹನೀಫ್, ಸುಕೇಶ್ ಕುಂದರ್ ಉಪಸ್ಥಿತರಿದ್ದರು.