ಮೇ 1 : ಉಡುಪಿಯ ಕೃಷ್ಣ ಮಠದ ರಾಜ್ಯಾಂಗಣದಲ್ಲಿ ರಾಜ್ಯ ಮಟ್ಟದ ಭಜನಾ ಕಮ್ಮಟ - ಗುರುವಂದನೆ
Posted On:
21-04-2022 05:07AM
ಉಡುಪಿ : ಶ್ರೀ ಕ್ರಷ್ಣ ಮಠ ಪರ್ಯಾಯ ಶ್ರೀ ಕ್ರಷ್ಣಾಪುರ ಮಠ ಉಡುಪಿ, ಇದರ ಆಶ್ರಯದಲ್ಲಿ,
ಮೋಹಿನಿ ಭಟ್ ಮಂಜೇಶ್ವರ ಮತ್ತು ಮಾಯಾ ಕಾಮತ್ ಈಶ್ವರ ನಗರ ಮಣಿಪಾಲ, ಶ್ರೀ ಮಹಾಮಾಯಾ ಭಜನಾ ಮಂಡಳಿ ಈಶ್ವರನಗರ ಮಣಿಪಾಲ, ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ ಕರ್ವಾಲು, ಅಲೆವೂರು, ಪರಿವರ್ತನಾ ಫೌಂಡೇಶನ್ ಮಣಿಪಾಲ ಇದರ ಸಹಯೋಗದಲ್ಲಿ ರಾಜ್ಯ ಮಟ್ಟದ ಭಜನಾ ಕಮ್ಮಟ - ಗುರುವಂದನೆ ಮೇ 1 ರಂದು ಬೆಳಿಗ್ಗೆ 9ಗಂಟೆಗೆ ಉಡುಪಿಯ ಕೃಷ್ಣ ಮಠದ ರಾಜ್ಯಾಂಗಣದಲ್ಲಿ ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆಯನ್ನು ಆಯೋಜಕರಿಂದ ಪರ್ಯಾಯ ಶ್ರೀ ಕ್ರಷ್ಣಾಪುರ ಮಠಾಧೀಶರಾದ ವಿದ್ಯಾಸಾಗರತೀರ್ಥ ಶ್ರೀಗಳಿಗೆ ನೀಡಲಾಯಿತು.
ಭಜನಾ ಗುರುತಿಲಕ, ಗಾನಕಲಾ ರತ್ನ, ದಾಸಸಿಂಚನ ಕಾರ್ಯಕ್ರಮದ ಮೂಲಕ ಮನೆ ಮನೆಗಳಲ್ಲಿ ಭಕ್ತಿಯ ಕುಸುಮ ಅರಳಿಸುತ್ತಿರುವ ಎಮ್ ಎಸ್ ಗಿರಿಧರ್ ಇವರ ಗುರುವಂದನಾ ಕಾರ್ಯಕ್ರಮ ನಡೆಯಲಿದೆ. ಎಮ್ ಎಸ್ ಗಿರಿಧರ್ ರವರು ದಾಸಸಿಂಚನದ ಮೂಲಕ ಸಾವಿರಕ್ಕೂ ಅಧಿಕ ಮನೆ ಮನೆ ಭೇಟಿ ಮಾಡಿ ಭಜನಾ ಕಾರ್ಯಕ್ರಮ ನಡೆಸಿರುವ ಸಾವಿರದ ಮೈಲಿಗಲ್ಲು ದಾಟಿದ ಸುಸಂದರ್ಭದಲ್ಲಿ ಅವರ ಶಿಷ್ಯೋತ್ತಮೆ ಮಾಯಾ ಕಾಮತ್ ಹಾಗೂ ಶಿಷ್ಯವೃಂದದವರೆಲ್ಲ ಸೇರಿ ಗೌರವಾರ್ಪಣೆ ಮಾಡುವ ಕಾರ್ಯಕ್ರಮ ಹಾಗೂ ಅವರಿಂದಲೇ ರಾಜ್ಯ ಮಟ್ಟದ ಭಜನಾ ಕಮ್ಮಟ ಕಾರ್ಯಕ್ರಮ ಆಯೋಜಿಸಲಾಗಿದೆ.
ಈಗಾಗಲೇ ಕಾರ್ಯಕ್ರಮಕ್ಕೆ ಐವತ್ತಕ್ಕೂ ಹೆಚ್ಚು ಭಜನಾ ಮಂಡಳಿಗಳು ತಮ್ಮ ಭಾಗವಹಿಸುವಿಕೆಯ ಕುರಿತು ಹೆಸರು ನೋಂದಾಯಿಸಿದ್ದು,
ಸಾವಿರಕ್ಕೂ ಅಧಿಕ ಭಗವದ್ಭಕ್ತರನ್ನು ಒಗ್ಗೂಡಿಸಿ ನಾಮಸ್ಮರಣೆ ಮಾಡುವ ಬಹಳ ದೊಡ್ಡ ಯೋಜನೆ ಇದಾಗಿದ್ದು ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ನಮ್ಮೊಂದಿಗೆ ಕೈ ಜೋಡಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಮುಖ್ಯ ರೂವಾರಿ ಮಾಯಾ ಕಾಮತ್, ಕಾಪು ಬಿಜೆಪಿ ಅಧ್ಯಕ್ಷರಾದ ಶ್ರೀಕಾಂತ ನಾಯಕ್, ಪರಿವರ್ತನಾ ಫೌಂಡೇಶನ್ ಅಧ್ಯಕ್ಷರಾದ ಮೋಹನ್ ಭಟ್, ಉದ್ಯಮಿಗಳಾದ ಐರೋಡಿ ಸಹನಶೀಲ ಪೈ, ವಿದ್ಯಾ ಮೋಹನ್ ಭಟ್ ಉಪಸ್ಥಿತರಿದ್ದರು.