ಉಡುಪಿ : ಅಜ್ಜಮ್ಮ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್ ಇದರ ಅಜ್ಜಮ್ಮ ಟ್ರೋಫಿಯ ಸಮಾರೋಪ ಸಮಾರಂಭವು ಬೀಡಿನಗುಡ್ಡೆ ಮಹಾತ್ಮಗಾಂಧಿ ಮೈದಾನದಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಮಂಜು ಕೊಳ, ರಿಕೇಶ್ ಪಾಲನ್ ಕಡೆಕಾರ್, ಕೃಷ್ಣಮೂರ್ತಿ ಆಚಾರ್ಯ, ಜೀವನ್ ಪಾಳೆಕಟ್ಟೆ, ಅರವಿಂದ್ ಕೆಪಿ, ಗಂಗಾಧರ್ ಸುವರ್ಣ, ಸತೀಶ್ ಸಾಲಿಯಾನ್, ಸಬಿತಾ ಕೊರಗ ಪಾಲ್ಗೊಂಡರು.
ಅಜ್ಜಮ್ಮ ಟ್ರೋಫಿಯ ಪ್ರಥಮ ಬಹುಮಾನ ಕರಾವಳಿ ಫ್ರೆಂಡ್ಸ್ ಮಲ್ಪೆ, ದ್ವಿತೀಯ ಬಹುಮಾನ ಜೈ ಮಾರುತಿ ಕಟಪಾಡಿ ಪಡೆದುಕೊಂಡರು.
ರವಿ ಕಡಿಯಾಳಿ ಕಾರ್ಯಕ್ರಮ ನಿರೂಪಿಸಿದರು. ಕ್ಲಬ್ ನ ಅಧ್ಯಕ್ಷರಾದ ಸುಹಾನ್ ಕಾಂಚನ್ ವಂದಿಸಿದರು.