ಕಾಪು : ತಾಲೂಕಿನ ಮಂಡೇಡಿ ಇನ್ನಂಜೆಯ ಶ್ರೀ ದೇವಿ ಭಜನಾ ಮಂಡಳಿ ಇದರ ವಾರ್ಷಿಕ ಭಜನಾ ಮಂಗಳೋತ್ಸವ ಏಪ್ರಿಲ್ 29 ರಂದು ಜರಗಲಿದೆ.
ಏಪ್ರಿಲ್ 29, ಶುಕ್ರವಾರದಂದು ಬೆಳಿಗ್ಗೆ ಗಂಟೆ 10ಕ್ಕೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ಗಂಟೆ 12ಕ್ಕೆ ಪ್ರಸಾದ ವಿತರಣೆ, ಮಧ್ಯಾಹ್ನ 1ರಿಂದ ಅನ್ನಸಂತರ್ಪಣೆ, ಸಾಯಂಕಾಲ ಗಂಟೆ 6ರಿಂದ ದೀಪ ಪ್ರತಿಷ್ಠೆಯೊಂದಿಗೆ ಭಜನೆ ಆರಂಭ, ರಾತ್ರಿ ಗಂಟೆ 12-30ಕ್ಕೆ ಭಜನಾ ಮಂಗಳೋತ್ಸವ ಜರಗಲಿದೆ.
ಭಜನಾ ಮಂಗಳೋತ್ಸವದಲ್ಲಿ ಶ್ರೀ ದೇವಿ ಭಜನಾ ಮಂಡಳಿಯ ಮಹಿಳಾ ಸದಸ್ಯರು, ಮಂಡೇಡಿ, ಶಿಮಂತೂರು ಶ್ರೀ ಆದಿಜನಾರ್ದನ ಮಕ್ಕಳ ಕುಣಿತ ಭಜನಾ ಮಂಡಳಿ, ಮುಲ್ಕಿ, ಇನ್ನಂಜೆಯ ಯುವತಿ ಮಂಡಲ ಸದಸ್ಯರಿಂದ ಕುಣಿತ ಭಜನೆ, ಶ್ರೀ ಮಹಾಲಸ ನಾರಾಯಣಿ ಭಜನಾ ಮಂಡಳಿ ಶಿರ್ವ, ಶ್ರೀ ಬ್ರಹ್ಮಲಿಂಗೇಶ್ವರ ಭಜನಾ ಮಂಡಳಿ ಕರಂದಾಡಿ,
ಶ್ರೀ ಸರಸ್ವತಿ ಭಜನಾ ಮಂಡಳಿ ಸರಸ್ವತಿನಗರ ಪಾಂಗಾಳ, ಶ್ರೀ ದೇವಿ ಭಜನಾ ಮಂಡಳಿ, ಮಂಡೇಡಿ
ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.