ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಸಾಹಿತ್ಯ ಬದುಕನ್ನು ಉತ್ತಮಗೊಳಿಸುತ್ತದೆ - ಗುರ್ಮೆ ಸುರೇಶ್ ಶೆಟ್ಟಿ

Posted On: 25-04-2022 08:55PM

ಉಡುಪಿ : ಅನಾದಿ ಕಾಲದಿಂದಲೂ ತುಳುವರು ಭಾವನಾತ್ಮಕವಾದ ಬದುಕನ್ನು ಕಟ್ಟಿಕೊಂಡವರು, ಪ್ರಕೃತಿಯನ್ನು ಆರಾಧಿಸುತಿದ್ದವರು. ಆದರೇ ಇಂದು ಮನೆಗಳು ದೊಡ್ಡದಾಗಿವೆ, ಆದರೇ ಮನಸ್ಸುಗಳು ಚಿಕ್ಕದಾಗುತ್ತಿವೆ. ತುಳುವರಲ್ಲಿಯೂ ಕೌಟುಂಬಿಕ ಶಿಥಿಲತೆ ಕಾಣಲಾರಂಭಿಸಿದೆ ಎಂದು ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ ವಿಷಾದ ವ್ಯಕ್ತಪಡಿಸಿದರು. ಅವರು ಉಡುಪಿ ತುಳುಕೂಟದ 27ನೇ ವರ್ಷದ ಪಣಿಯಾಡಿ ಕಾದಂಬರಿ ಪ್ರಶಸ್ತಿ ಪಡೆದ, ಮಂಗಳೂರಿನ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕಿ ಪ್ರೊ. ಅಕ್ಷಯಾ ಆರ್. ಶೆಟ್ಟಿ ಅವರ ದೆಂಗ ಕಾದಂಬರಿಯನ್ನು ಬಿಡುಗಡೆ ಮಾಡಿ ಮಾತನಾಡಿದರು. ಉತ್ತಮ ಸಾಹಿತ್ಯದಿಂದ ಬದುಕನ್ನು ಉತ್ತಮಗೊಳಿಸಲು ಸಾಧ್ಯವಿದೆ. ಕಾದಂಬರಿ ಎಂಬುದು ಜನರ ನಡುವಿನ ಮಾತು ಘಟನೆಗಳೇ ಆಗುತ್ತವೆ. ಆದ್ದರಿಂದ ತುಳುಕೂಟವು ತುಳು ಭಾಷೆಯಲ್ಲಿ ಕಾದಂಬರಿಗಳನ್ನು ಬರೆಯುವುದಕ್ಕೆ ನೀಡುತ್ತಿರುವ ಪ್ರೋತ್ಸಾಹ ಶ್ಲಾಘನೀಯವಾದುದು ಎಂದರು.

ಪ್ರೊ. ಅಕ್ಷಯಾ ಆರ್. ಶೆಟ್ಟಿ ಅವರಿಗೆ ಜನಪದ ವಿದ್ವಾಂಸ ಕೆ.ಎಲ್.ಕುಂಡಂತಾಯ ಅವರು ಪ್ರಶಸ್ತಿ ನೀಡಿ ಸನ್ಮಾನಿಸಿದರು. ಕಾದಂಬರಿಯನ್ನು ಡಾ.ನಿಕೇತನ ಅವರು ಪರಿಚಯಿಸಿದರು.

ತುಳುಕೂಟದ ಅಧ್ಯಕ್ಷ ಜಯಕರ ಶೆಟ್ಟಿಇಂದ್ರಾಳಿ ಅಧ್ಯಕ್ಷತೆ ವಹಿಸಿದ್ದರು. ದಾನಿ ವಿಶ್ವನಾಥ ಶೆಣೈ, ಪ್ರ.ಕಾರ್ಯದರ್ಶಿ ಗಂಗಾಧರ ಕಿದಿಯೂರು, ಖಜಾಂಚಿ ಎಂ.ಜಿ.ಚೈತನ್ಯ, ಉಪಾಧ್ಯಕ್ಷೆ ಮನೋರಮಾ ಶೆಟ್ಟಿ ವೇದಿಕೆಯಲ್ಲಿದ್ದರು.

ಕಾದಬಂರಿ ಪ್ರಶಸ್ತಿ ಸಮಿತಿ ಸಂಚಾಲಕಿ ತಾರಾ ಉಮೇಶ್ ಆಚಾರ್ಯ ಸ್ವಾಗತಿಸಿದರು, ಸರೋಜಾ ಯಶವಂತ್ ಮತ್ತು ರಶ್ಮಿ ಶೆಣೈ ಕಾರ್ಯಕ್ರಮ ನಿರೂಪಿಸಿದರು. ಯಶೋಧಾ ಕೇಶವ್ ಮತ್ತು ವೇದಾವತಿ ಸಹಕರಿಸಿದರು.