ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕಳಚಿತು ಕುಲಾಲ ಸಮುದಾಯದ ಹಿರಿಯ ಕೊಂಡಿ - ಬೋಳ ಸಂಜೀವ ಕುಲಾಲ್ ವಿಧಿವಶ

Posted On: 27-04-2022 05:52PM

ಕಾರ್ಕಳ : ಬೋಳ ಕುಲಾಲ ಸಂಘದ ಮಾಜಿ‌ ಅಧ್ಯಕ್ಷರು, ಹಿರಿಯರು, ಅನುಭವಿಗಳೂ ಆದ ಸಂಜೀವ ಕುಲಾಲ್ ಬೋಳ ಇವರು ಮುಂಬೈಯ ತಮ್ಮ ನಿವಾಸದಲ್ಲಿ ವಿಧಿವಶರಾದರು.

ಇಳಿ ವಯಸಿನಲ್ಲೂ ಸದಾ ಲವಲವಿಕೆಯಿಂದ , ಉತ್ಸಾಹದಿಂದ ಸಮುದಾಯದ ಜನರು ದುರ್ಬಲರ ಬಗ್ಗೆ ಅಪಾರ ಕಾಳಜಿ ಹೊಂದಿರುವ ಇವರು ಇಂದು ಬಂಧು ಬಳಗ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ಇವರ ಅಗಲುವಿಕೆ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದ್ದು, ಕುಲಾಲ ಸಂಘ (ರಿ ) ಕಾಪು ವಲಯವು ಮೃತರ ದಿವ್ಯ ಆತ್ಮಕ್ಕೆ ಚಿರಶಾಂತಿಯನ್ನು‌ ಕೋರಿದೆ.