ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಇನ್ನಂಜೆ : ಔಷಧಿ ರಹಿತ ಕೆಚ್ಚಲು ಬಾವು ಗುಣಪಡಿಸುವುದು - ಕಾರ್ಯಾಗಾರ

Posted On: 03-05-2022 07:20PM

ಕಾಪು : ಕರ್ನಾಟಕ ಹಾಲು ಮಹಾಮಂಡಲ (ನಿ.), ಬೆಂಗಳೂರು, ದ.ಕ. ಹಾಲು ಒಕ್ಕೂಟ (ನಿ.), ಮಂಗಳೂರು ಹಾಗೂ ಇನ್ನಂಜೆ ಹಾಲು ಉತ್ಪಾದಕರ ಸಹಕಾರ ಸಂಘದ ಸಹಭಾಗಿತ್ವದಲ್ಲಿ ಔಷಧಿ ರಹಿತ ಕೆಚ್ಚಲು ಬಾವು ಗುಣಪಡಿಸುವುದು ಕಾರ್ಯಾಗಾರ ಮೇ 4 ಬೆಳಿಗ್ಗೆ 9.30ಕ್ಕೆ ಇನ್ನಂಜೆ, ಮಡುಂಬು (ಕೊಲ್ಲಂಗಾಲ್) ಶೇಖರ್‌ ಎನ್‌. ಬಂಗೇರ ಅವರ ಮನೆಯ ಹತ್ತಿರ ಜರಗಲಿದೆ.

ಈ ಕಾರ್ಯಾಗಾರದ ಅಧ್ಯಕ್ಷತೆಯನ್ನು ದ.ಕ.ಸ.ಹಾಲು ಒಕ್ಕೂಟ (ನಿ.), ಮಂಗಳೂರು ಇದರ ನಿಕಟಪೂರ್ವ ಅಧ್ಯಕ್ಷರಾದ ರವಿರಾಜ್ ಹೆಗ್ಡೆ ವಹಿಸಲಿದ್ದು, ಕ. ಹಾ. ಮ., ಬೆಂಗಳೂರು ಇದರ ನಿರ್ದೇಶಕರಾದ ಕಾಪು ದಿವಾಕರ ಶೆಟ್ಟಿ ಕಾರ್ಯಾಗಾರವನ್ನು ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಶೇ. ಇದರ ಉಪ ವ್ಯವಸ್ಥಾಪಕರಾದ ಡಾ. ಅನಿಲ್ ಕುಮಾರ್ ಶೆಟ್ಟಿ, ಎ.ಎಚ್./ಎ.ಐ. ಉಪ ವ್ಯವಸ್ಥಾಪಕರಾದ ಡಾ. ಟಿ. ವಿ. ಶ್ರೀನಿವಾಸ, ಸಂಪನ್ಮೂಲ ವ್ಯಕ್ತಿಯಾಗಿ ರಘೋತ್ತಮ್ ಭಾಗವಹಿಸಲಿದ್ದಾರೆ.

ಇನ್ನಂಜೆ ಹಾ.ಉ.ಸ.ಸಂ. (ನಿ.) ಅಧ್ಯಕ್ಷರಾದ ಲಕ್ಷ್ಮಣ ಕೆ. ಶೆಟ್ಟಿಯವರ ಗೌರವ ಉಪಸ್ಥಿತಿಯಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.