ಶಿರ್ವ ಮಂಚಕಲ್ಲಿನ ಕುತ್ಯಾರು ರಸ್ತೆಯಲ್ಲಿರುವ "ಇಂದ್ರಪುರ ಅಂಗನವಾಡಿ" ಕೇಂದ್ರಕ್ಕೆ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಸಮಾಜ ಸೇವಕ ಪವನ್ ಕುಮಾರ್ ಅವರು ಸುಮಾರು 8000 ರೂಪಾಯಿ ಮೌಲ್ಯದ ಕುಡಿಯುವ ನೀರಿನ ಯಂತ್ರವನ್ನು ನೀಡಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಪವನ್ ಕುಮಾರ್ ಅವರು ಕರೋನದಿಂದ ಜನರು ಕಂಗಾಲಾಗಿದ್ದು,
ಆರೋಗ್ಯದ ಕಡೆ ತುಂಬಾ ಜಾಗ್ರತೆಯನ್ನು ವಹಿಸುತ್ತಾರೆ.
ಅದರಲ್ಲೂ ಮುಖ್ಯವಾಗಿ ಮಕ್ಕಳು. ಆದ ಕಾರಣ ಮಕ್ಕಳ ಆರೋಗ್ಯ ದೃಷ್ಟಿಯಿಂದ ಕುಡಿಯುವ ನೀರಿನ ಯಂತ್ರವನ್ನು ನೀಡಿರುತ್ತೆನೆಂದು ತಿಳಿಸಿದರು..
ಈ ಸಂಧರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಸುನಿತಾ ಪೂಜಾರಿ ಹಾಗೂ ಸಹಾಯಕಿ ಪ್ರಭಾ ಅವರು ಉಪಸ್ಥಿತರಿದ್ದರು..
ಪವನ್ ಅವರ ಈ ಕಾರ್ಯಕ್ಕೆ ಶಿಕ್ಷಕರು ಪ್ರಸಂಶಿದರು.