ಕೊರೋನ ಸಂಕಷ್ಟದ ಸಮಯದಲ್ಲಿ ಬಿರುವೆರ್ ಕಾಪು ಸೇವಾ ಟ್ರಸ್ಟ್ ಕೈಗೊಂಡ ಅತಿ ಪ್ರಾಮುಖ್ಯತೆಯ *ಬ್ರಹ್ಮ ಶ್ರೀ ನಾರಾಯಣ ಗುರು ಸಾಂತ್ವನ* ಎಂಬ ಯೋಜನೆಯು ಕೊನೆಯ ಹಂತದಲ್ಲಿದೆ.
ತುಂಬಾ ಜನ ನಿಸ್ವಾರ್ಥ ಸೇವಾ ದಾನಿಗಳು ತಮ್ಮ ಕೈಯಲಾದ ಸಹಾಯವನ್ನು ಈ ಯೋಜನೆಗೆ ಮಾಡಿದ್ದಾರೆ.
ಅದರಿಂದ ಟ್ರಸ್ಟಿನ ಮುಖಾಂತರ ಅನೇಕ ಕಷ್ಟಕ್ಕೊಳಗಾದ ಸಂಸಾರಗಳಿಗೆ ಸಹಾಯ ಮಾಡಿದ್ದಾರೆ,
ಕೊನೆಯ ಹಂತದ ನಿಸ್ವಾರ್ಥ ಸೇವೆಯಾಗಿ ಬಿರುವೆರ್ ಕಾಪು ಸೇವಾ ಟ್ರಸ್ಟಿನ ಹೆಮ್ಮೆಯ ಸದಸ್ಯರಾದ ಶ್ರೀ ಸುರೇಶ್ ಪೂಜಾರಿ ಕಲ್ಲುಗುಡ್ಡೆ ಇವರ ಹೇಳಿಕೆಯ ಪ್ರಕಾರ ಬಿಲ್ಲವರ ಕುಲದೇವರ ಆರಾಧನಾಲಯವಾದ ಗರಡಿಗಳಲ್ಲಿ ಪೂ ಪೂಜೆ ಹಾಗೂ ದರ್ಶನ ಸೇವೆ ಮಾಡುವ ಆಯ್ದ ಬಡ ಸಂಸಾರಕ್ಕೆ, ಈ ಕ್ಲಿಷ್ಟಕರ ಸಮಯದಲ್ಲಿ ಟ್ರಸ್ಟ್ ನಿಂದಾದ ಸಣ್ಣ ಮಟ್ಟದ ಸಹಾಯ ಮಾಡುವ ನಿಟ್ಟಿನಲ್ಲಿ ಇಂದು ದಿನಾಂಕ 14.06.2020 ರ ಬೆಳಿಗ್ಗೆ ಆಯ್ದ 8 ಗರೋಡಿಗಳ ಸೇವಾದಾರರಿಗೆ ಸಹಾಯಧನವನ್ನು ವಿತರಿಸಲಾಯಿತು. ಈ ಕೆಲಸಕ್ಕೆ ಸಹಕರಿಸಿದ ರಾಕೇಶ್ ಕುಂಜೂರು, ವಿಜಯ್ ಧೀರಜ್ ಬಂಟಕಲ್ಲ್ ಮತ್ತು ಟ್ರಸ್ಟಿನ ಸದಸ್ಯರಾದ
ಕಾರ್ತಿಕ್ ಅಮೀನ್ ಕಲ್ಲುಗುಡ್ಡೆ, ವಿಕ್ಕಿ ಪೂಜಾರಿ ಮಡುಂಬು, ಸುಧಾಕರ್ ಸಾಲ್ಯಾನ್ ಕಾಪು ಪಡು, ಅನಿಲ್ ಅಮೀನ್ ಕಾಪು ಪಡು, ಮನೋಹರ್ ಕಲ್ಲುಗುಡ್ಡೆ ಉಪಸ್ಥಿತರಿದ್ದರು,
ಟ್ರಸ್ಟಿನ ಒಳ್ಳೆಯ ಕಾರ್ಯಕ್ರಮ ಆಯೋಜಿಸಿ ಅದನ್ನು ಒಳ್ಳೆಯ ರೀತಿಯಲ್ಲಿ ಮಾಡಿದ ಎಲ್ಲರಿಗೂ ಟ್ರಸ್ಟಿನ ಮುಖ್ಯಸ್ಥ ಬಾಲಕೃಷ್ಣ ಆರ್ ಕೋಟ್ಯಾನ್ ಕಾಪು (ಮಸ್ಕತ್) ಧನ್ಯವಾದಗಳನ್ನು ಅರ್ಪಿಸಿದರು.