ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಜನರ ಸಮಸ್ಯೆಗೆ ಕ್ಯಾರೇ ಅನ್ನದ ಕಾಪು ಮೆಸ್ಕಾಂ - ನಮ್ಮ ಕಾಪು ನ್ಯೂಸ್

Posted On: 18-06-2020 05:37PM

ಕಾಪು.ಜೂನ್,18 : ತಾಲೂಕಿನ 92ನೇ ಹೇರೂರು ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಮನಬಂದಂತೆ ವಿದ್ಯುತ್ ಕಡಿತ ಗೊಳಿಸುತ್ತಿದ್ದು ಹೇರೂರು, ಕಳತ್ತೂರು, ಮಜೂರು, ಪಾದೂರು ಭಾಗದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ, ದಿನದ ಮೂರು ಹೊತ್ತು ಮನಬಂದಂತೆ ವಿದ್ಯುತ್ ಕಡಿತ ಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಈ ಹಿಂದೆಯೂ ಇದರ ಬಗ್ಗೆ ಕಾಪು ಮೆಸ್ಕಾಂ ಕಛೇರಿಗೆ ದೂರು ನೀಡಿದ್ದರೂ ಸರಿಯಾದ ಉತ್ತರ ನೀಡದೆ ಹೇರೂರು ವ್ಯಾಪ್ತಿಯವರು ಶಿರ್ವದ ಕಚೇರಿಯನ್ನು ಸಂಪರ್ಕಿಸಿಬೇಕು ಎಂದು ಹೇಳಿ ಕರೆ ಕಟ್ ಮಾಡುತ್ತಿದ್ದಾರೆ, ಶಿರ್ವ ಕಚೇರಿಯನ್ನು ಸಂಪರ್ಕಿಸಿದಾಗ ಕಾಪು ಕಚೇರಿಯನ್ನು ಸಂಪರ್ಕಿಸಿ ಅನ್ನುತ್ತಾರೆ ಮತ್ತು ಯಾರಿಂದಲೂ ಯಾವುದೇ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ , ಕಳೆದ ಮೂರ್ನಾಲ್ಕು ವರ್ಷಗಳಿಂದ ಈ ಸಮಸ್ಯೆ ಉದ್ಭವವಾಗಿದ್ದು, ಮಳೆಗಾಲ ಆರಂಭವಾಗುವ ಮುನ್ನ ಎಚ್ಚೆತ್ತುಕೊಳ್ಳದೆ, ಮಳೆಗಾಲ ಆರಂಭವಾದ ನಂತರ ಟ್ರಾನ್ಸ್‌ಫರ್ಮರ್ ಮೇಲೆ ಹೋಗಿರುವ ಮರ, ಗಿಡಗಳ ಗೆಲ್ಲುಗಳನ್ನು ಕಡಿಯಲು ವಿದ್ಯುತ್ ಕಡಿತ ಮಾಡುತ್ತಿದ್ದು, ಈ ವಿಷಯಕ್ಕೆ ಸಂಬಂಧಪಟ್ಟಂತೆ ಮಜೂರು, ಹೇರೂರು, ಕಲ್ಲುಗುಡ್ಡೆ, ಕುಂಜ, ಪಾದೂರು, ಶಾಂತಿಗುಡ್ಡೆ ಮತ್ತು ಕುರಾಲು ಪ್ರದೇಶದ ಗ್ರಾಮಸ್ಥರು ಇದೆ ತಿಂಗಳು ಎಂಟು ತಾರೀಕಿಗೆ ಕಾಪು ಮೆಸ್ಕಾಂ ಗೆ ವಿದ್ಯುತ್ ಕಡಿತ ಪರಿಹಾರಕ್ಕಾಗಿ ಮನವಿ ಮಾಡಿದ್ದಾರೆ ಸಮಸ್ಯೆ ಬಗೆಹರಿಯದೆ ಇರುವುದರಿಂದ ಮಾಧ್ಯಮದವರೊಂದಿಗೆ ಮಾತನಾಡಿದ ಸಾರ್ವಜನಿಕರು, ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸದ ಅಧಿಕಾರಿಗಳು ನಮಗೆ ಬೇಡವೇ ಬೇಡ.. ಶೀಘ್ರವೇ ವರ್ಗಾವಣೆ ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.. ಮೇಲಾಧಿಕಾರಿಗಳು ದಯವಿಟ್ಟು ಇದರತ್ತ ಗಮನ ಹರಿಸಬೇಕು ಮತ್ತು ಸಮಸ್ಯೆಗೆ ಶೀಘ್ರವೇ ಸ್ಪಂದನೆ ನೀಡಬೇಕೆಂದು ಆಗ್ರಹಿಸಿದ್ದಾರೆ..