ಸೂರ್ಯ ನಮಸ್ಕಾರ ಮಾಡಿ ಗಿನ್ನಿಸ್ ದಾಖಲೆ ಮಾಡಲು ಹೊರಟ ರೇಣು ಗೋಪಿ
ಸೂರ್ಯ ನಮಸ್ಕಾರ : ಗಿನ್ನಿಸ್ ದಾಖಲೆಯತ್ತ ರೇಣು ಗೋಪಿ…
ಉಡುಪಿ : ಶ್ರೀಮತಿ ರೇಣುಕಾ ಶುಭಪ್ರದ ಪೆರಂಪಳ್ಳಿ ಉಡುಪಿ ಜಿಲ್ಲೆಯ ಇವರು 108 ಬಾರಿ ಸೂರ್ಯನಮಸ್ಕಾರವನ್ನು ಬರೇ 15 ನಿಮಿಷದಲ್ಲಿ ಮುಗಿಸಿ ವಿಶ್ವದಾಖಲೆ ಗಿನ್ನಿಸ್ ರೆಕಾರ್ಡ್ ಸ್ಪರ್ಧಿಸಲು ತಯಾರಿ ನಡೆಸುತ್ತಿದ್ದರು, ಅದೇ ಸಂದರ್ಭದಲ್ಲಿ ವಕ್ಕರಿಸಿಕೊಂಡ ಕೊರೊನ ಲಾಕ್ಡೌನ್ ನಿಂದಾಗಿ ಇನ್ನು ಕೂಡ ಸಾಧನೆ ಮಾಡಲು ಪ್ರಯತ್ನ ಪಡುತ್ತಿದ್ದಾರೆ
ಇವರು ಪೆರಂಪಳ್ಳಿ ದೊಡ್ಡಣ್ಣಗುಡ್ಡೆ ಪರಿಸರದಲ್ಲಿ ಗೋಪಿ ರಾಧಿಕಾ ಎಂದು ಕರೆಸಿಕೊಳ್ಳುತ್ತಿದ್ದ ಇವರಿಗೆ ಬೆನ್ನೆಲುಬಾಗಿ ಪೊಲೀಸ್ ಇಲಾಖೆಯಲ್ಲಿ ಅಧಿಕಾರಿಯಾಗಿರುವ ಅವರ ಪತಿ ಗೋಪಾಲಕೃಷ್ಣ ಹಾಗೂ ಬಂಧುಗಳು ಮತ್ತು ಸ್ನೇಹಿತರು ಇವರೆಲ್ಲರ ಪ್ರೇರಣೆಯಿಂದ ಮತ್ತು ಪ್ರೋತ್ಸಾಹದಿಂದ,
ಈ ಒಂದು ಕಾರ್ಯದ ಯಶಸ್ವಿಗೆ ನೀವು ಕೂಡ ಸಹಕರಿಸಬೇಕಾಗಿ ಗೋಪಿ ರಾಧಿಕಾ ಅವರು ವಿನಂತಿಸಿಕೊಂಡಿದ್ದಾರೆ.
ಅಂದ ರೇಣು ಗೋಪಿ ಇಷ್ಟೆಲ್ಲಾ ಹರಸಾಹಸ ಮಾಡುತ್ತಿರುವುದು ಯಾವುದೇ ಗುರುಗಳ ಸಹಾಯವಿಲ್ಲದೆ, ನುರಿತ ಯೋಗ ಗುರುಗಳ ಅವಶ್ಯಕತೆ ಇದೆ, ಇದರಿಂದ ಇನ್ನಷ್ಟು ಸಾಧನೆ ಮಾಡಬಹುದು ಅನ್ನುತ್ತಾರೆ ರೇಣು ಗೋಪಿ,
"ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ" ಎಂಬ ನಾಣ್ಣುಡಿ ಅಕ್ಷರಶಹ ಸತ್ಯ ಎಂಬುದು ಇಲ್ಲಿ ತಿಳಿಯಬಹುದು.