ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕಾಪುವಿನಲ್ಲಿ ಮೀನು ಮಾರುತ್ತಿದ್ದ ವೃದ್ಧೆಯ ಕಾಲಿನ ಸಮಸ್ಯೆಗೆ ನೆರವಾಗುವಿರಾ?

Posted On: 20-06-2020 01:34PM

ಹಾಸಿಗೆ ಹಿಡಿದು ನಡೆದಾಡಲು ಹಂಬಲಿಸುವ ವೃದ್ಧೆಗೆ ನೆರವಾಗುವಿರಾ? ಬ್ರಹ್ಮಾವರ.20,ಜೂನ್ : ಗಂಗು ಕಾಂಚನ್ ಉಡುಪಿ ಜಿಲ್ಲೆಯ ಮಲ್ಪೆ‌ ಸಮೀಪ ವಾಸವಿದ್ದು, ಮೀನಿನ ಬುಟ್ಟಿ‌ ಹೊತ್ತು‌ ಮನೆ ಮನೆ ಸಾಗಿ ದಿನದ ಖರ್ಚಿನ ಹಣ ಸರಿದೂಗಿಸುತ್ತಿದ್ದವರು. ಕಾಪು ಭಾಗದಲ್ಲಿ ಕೂಡಾ ಮೀನು ಮಾರಲು ಮೀನಿನ ಬುಟ್ಟಿ ಹೊತ್ತು ಬರುತ್ತಿದ್ದರು ದುರಾದೃಷ್ಟವಶಾತ್ ಕೆಲವು ವರ್ಷಗಳಿಂದ ನಡೆದಾಡುವ ಕಾಲಿನ ಕೀಲು ಸಮಸ್ಯೆಯಿಂದ‌ ಎದ್ದು ನಿಲ್ಲಲೂ ಸಾಧ್ಯವಾಗದೆ ಜೊತೆಗೆ ದುಡಿಮೆಯೂ ಇಲ್ಲದೆ, ಅತ್ತ ಪೋಷಕರೂ ಇರದೆ ಕಂಗಾಲಾಗಿದ್ದರು. ಇವರ ದಯನೀಯ ಪರಿಸ್ಥಿತಿಯನ್ನು ಮನಗಂಡ ಬ್ರಹ್ಮಾವರ ' ಅಪ್ಪ-ಅಮ್ಮ ಅನಾಥಾಲಯ'ದ ಸಂಚಾಲಕ ಪ್ರಶಾಂತ್‌ ಪೂಜಾರಿ ತಮ್ಮ‌ ಆಶ್ರಮಕ್ಕೆ ಕರೆದುಕೊಂಡು ‌ಹೋಗಿ ರಕ್ಷಣೆ ‌ನೀಡಿದ್ದಾರೆ. ಇವರನ್ನು ವಿವಿದ‌ ಆಸ್ಪತ್ರೆಗಳಲ್ಲಿ ಪರೀಕ್ಷಿಸಲಾಗಿದ್ದು, ಚಿಕಿತ್ಸೆಗೆ ಸುಮಾರು ಒಂದು ‌ಲಕ್ಷ ರೂಪಾಯಿಗಿಂತಲೂ ಹೆಚ್ಚಿನ ಖರ್ಚು ‌ಮಾಡಬೇಕಿದೆ. ಅಜ್ಜಿಗೆ ಒಂದು‌ ಕಡೆ ದೈಹಿಕ ‌ನೋವು. ಇನ್ನೊಂದು ಕಡೆ ಕಾಲುಗಳನ್ನು ಕಳೆದುಕೊಳ್ಳುವ ‌ಆತಂಕ. ಹೀಗಾಗಿ‌ ದಾನಿಗಳ ನೆರವಿನ‌ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ ಪ್ರಶಾಂತ್ ಪೂಜಾರಿಯವರು‌ ತಮ್ಮ ಆಶ್ರಮದಲ್ಲಿ 21 ಮಂದಿ ನಿರ್ಗತಿಕರನ್ನು‌ ಜೊತೆಯಾಗಿ ಇರಿಸಿಕೊಂಡು ಎಲ್ಲಾ ರೀತಿಯ ವ್ಯವಸ್ಥೆಯನ್ನು ಉಚಿತವಾಗಿ ಕಲ್ಪಿಸುತ್ತಿದ್ದಾರೆ. ದಾನಿಗಳ ನೆರವು ಸಿಕ್ಕಲ್ಲಿ ಅಜ್ಜಿಯನ್ನು ಸ್ವಂತ‌ ಕಾಲಿನಲ್ಲಿ ನಿಲ್ಲಿಸುವ ತವಕವೂ ಅವರಲ್ಲಿದೆ. ಸಹೃದಯಿ ಬಂಧುಗಳು , ಸಂಘಸಂಸ್ಥೆಗಳು ತಮ್ಮಿಂದ ಸಾಧ್ಯವಾದಷ್ಟು ನೆರವನ್ನು ನೀಡಿ ಸಹಕರಿಸಿ ಗಿರಿಜಾ ಕೃಷ್ಣ ಪೂಜಾರಿ ಚಾರಿಟೇಬಲ್ ಟ್ರಸ್ಟ್ (ರಿ.) ಕೂರಾಡಿ. ಅಪ್ಪ-ಅಮ್ಮ ಅನಾಥಾಲಯ ಬ್ರಹ್ಮಾವರ (ಉಚಿತ ಸೇವೆ) ಸಂಚಾಲಕರು- ಪ್ರಶಾಂತ್ ಪೂಜಾರಿ ಕೂರಾಡಿ. ಗಿರಿಜಾ ಕೃಷ್ಣ ಪೂಜಾರಿ ಚಾರಿಟೇಬಲ್ ಟ್ರಸ್ಟ್ (ರಿ). ಕೂರಾಡಿ ಅಪ್ಪ ಅಮ್ಮ- ಅನಾಥಾಲಯ(ಉಚಿತ ಸೇವೆ) :9164765898,9986111989 ಆಶ್ರಮಕ್ಕೆ ದೇಣಿಗೆ ಅಥವಾ ಧನ ಸಹಾಯ ನೀಡಲು ಇಚ್ಚಿಸುವವರು ನೇರವಾಗಿ ಆಶ್ರಮಕ್ಕೆ ಬೇಟಿ ನೀಡಿ ಅಥವಾ ಬ್ಯಾಂಕ್ ನ ಖಾತೆ ಗಿರಿಜಾ ಕೃಷ್ಣ ಪೂಜಾರಿ ಚಾರಿಟೇಬಲ್ ಟ್ರಸ್ಟ (ರಿ.)ಕೂರಾಡಿ 1 ಕರ್ನಾಟಕ ಬ್ಯಾಂಕ್ ಉಪ್ಪಿನಕೋಟೆ A/c no.7172000100017301 IFSC Code: KARB0000717 2 ಕೆನರಾ ಬ್ಯಾಂಕ್ ಕುರಾಡಿ A/c No.02103070000145, IFSC CODE:SYNB0000210 ಸಂಖ್ಯೆಗೆ ಜಮಾ ಮಾಡಬಹುದಾಗಿದೆ. Google pay & Phone pay.9164765898