ಕಾಪು, 20.ಜೂನ್ : ಭಾರತಾಂಬೆಯ ಗಡಿ ರಕ್ಷಣೆಯಲ್ಲಿ ಕಾರ್ಯನಿರತರಾಗಿದ್ದ ಭಾರತೀಯ ಸೈನಿಕರು ಇತ್ತೀಚೆಗೆ ಕುತಂತ್ರಿ ಚೀನೀ ಸೈನಿಕರಿಂದ ಹತರಾಗಿರುವುದು ಅತ್ಯಂತ ಖೇದಕರ ಮತ್ತು ಖಂಡನೀಯ. ಚೀನೀ ಸೈನಿಕರು ಎಲ್ಲ ಗಡಿ ನಿಯಮ, ನಿರ್ಬಂಧಗಳನ್ನು ಉಲ್ಲಂಘಿಸಿ ಭಾರತದ ಸೈನಿಕರನ್ನು ಹತ್ಯೆಗೈದಿರಿವುದು ಮತ್ತು ದೇಶದ ಗಡಿಯಲ್ಲಿ ಉದ್ವಿಘ್ನತೆ ಹೆಚ್ಚುತ್ತಿರುವುದು ಸರ್ಕಾರದ ಆಡಳಿತ ವೈಫಲ್ಯವನ್ನು ಎತ್ತಿ ತೋರಿಸುತ್ತದೆ. ದೇಶಕ್ಕಾಗಿ ಪ್ರಾಣಾರ್ಪಣೆಗೈದ ವೀರ ಯೋಧರಿಗೆ ನಮ್ಮ ಭಾವಪೂರ್ಣ ನಮನಗಳು, ಹುತಾತ್ಮರಾದ ವೀರ ಯೋಧರ ಬಲಿದಾನ ವ್ಯರ್ಥವಾಗಬಾರದು, ಹಾಗೂ ಅವರ ಕುಟುಂಬವರ್ಗಕ್ಕೆ ಆತ್ಮಸ್ಥೈರ್ಯ ವನ್ನು, ಶಕ್ತಿಯನ್ನು ನೀಡಬೇಕು ಎಂದು ಹೇಳಿದರು.
ಅವರು ಕಾಪು ರಾಜೀವ್ ಭವನದಲ್ಲಿ, ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯಕ್ರಮ ದಲ್ಲಿ ಭಾಗಿಯಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಲಾಕ್ ಅಧ್ಯಕ್ಷರಾದ ನವೀನಚಂದ್ರ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ರುಗಳಾದ ಕಾಪಿ ದಿವಾಕರ್ ಶೆಟ್ಟಿ, ಕೆ. ಇಬ್ರಾಹಿಂ ಮನಹರ್, ಪ್ರಧಾನ ಕಾರ್ಯದರ್ಶಿ ವೈ. ಸುಕುಮಾರ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ವಿ.ಅಮೀನ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಲೇ, ಯುವ ಕಾಂಗ್ರೆಸ್ ಅಧ್ಯಕ್ಷರುಗಳಾದ ಮೆಲ್ವಿನ್ ಡಿಸೋಜ, ಚರಣ್ ವಿಠ್ಠಲ್ ಕುದಿ,ಯು. ಸಿ.ಶೇಕಬ್ಬ,ದಿನೇಶ್ ಕೋಟ್ಯಾನ್,ಅಮೀರ್ ಮೊಹಮ್ಮದ್, ಅಬ್ದುಲ್ ಹಮೀದ್, ನಾಗೇಶ್ ಸುವರ್ಣ, ಕೆ. ಎಚ್. ಉಸ್ಮಾನ್, ಮಹಮ್ಮದ್ ಇಮ್ರಾನ್,ಪ್ರಭಾಕರ ಆಚಾರ್ಯ, ಶಾಂತಲತಾ ಶೆಟ್ಟಿ, ಸೌಮ್ಯಾ ಎಸ್., ಅಶ್ವಿನಿ.ಎನ್., ಸುನಿಲ್ ಬಂಗೇರ, ಪ್ರಶಾಂತ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.