ಉಡುಪಿ.28, ಜೂನ್ : ಸಮಾಜಿಕ ಕಾಯ೯ಕತ೯, ವಿಶೇಷವಾಗಿ ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ವಲಸೆ ಕಾರ್ಮಿಕರಿಗೆ ಊಟ ವನ್ನು ದಿನ ನಿತ್ಯ ಹಂಚಿದ ಟೀಮ್ ಹೆಲ್ಪಿಂಗ್ ಹ್ಯಾಂಡ್ಸ್ ನ ಅತ್ಯಂತ ಸಕ್ರಿಯ ಸದಸ್ಯ, ಇನ್ನಿತರ ಸಮಾಜಮುಖಿ ಚಟುವಟಿಕೆಗಳಲ್ಲಿ ತನ್ನನ್ನು ತಾನು ಕಳೆದ ಹಲವಾರು ವರ್ಷಗಳಿಂದ ತೊಡಗಿಸಿಕೊಂಡಿರುವ ರಾಘವೇಂದ್ರಪ್ರಭುಕರ್ವಾಲು ಇವರನ್ನು ಪಕ್ಷದ ವತಿಯಿಂದ ಸನ್ಮಾನಿಸಲಾಯಿತು
ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಎಲ್ಲರೂ ಸೂರ್ಯನ ಹಾಗೆ ಪ್ರಪಂಚಾದದ್ಯಂತ ಬೆಳಕನ್ನು ನೀಡಲು ಸಾಧ್ಯವಿಲ್ಲ ಆದರೆ ಹಣತೆಯಂತೆ ತಮ್ಮ ತಮ್ಮ ವ್ಯಾಪ್ತಿಯಲ್ಲಿ ಬೆಳಕು ನೀಡುತ್ತಾ ,ಅದೇ ಮಾದರಿಯಲ್ಲಿ ಸಮಾಜ ಸೇವೆ ಮಾಡಬೇಕು ಎಂದರು ಹಾಗೂ ಇತ್ತೀಚೆಗೆ ರಾಜ್ಯದಲ್ಲಿ ಉತ್ತಮ ಹೆಸರು ಮಾಡುತ್ತಾ ಇರುವ ಕರಾಸಪಕ್ಷ ವನ್ನು ಅಭಿನಂದಿಸಿದರು.
ಪ್ರಸಾದ್ ಕರ್ಕಡ, ಶಾಹಿದ್ ಅಲಿ, ವಿನುತಾ ಕಿರಣ್,ರಫಿಕ್ ಕಲ್ಯಾಣಪುರ ,ಅಮೀರ್ ಬೆಳಪು, ಕಿರಣ್ ಕುಮಾರ್ ಪೆರ್ಡೂರು, ವಿನೋದ್ ಬಂಗೇರ, ಸಲ್ಮಾನ್ ಅಹ್ಮದ್, ದಿನೇಶ್ ರಾಮ್, ಅಬ್ದುಲ್ ರಜಾಕ್ ಮತ್ತಿತರರು ಉಪಸ್ಥಿತರಿದ್ದರು