ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಪಡುಬಿದ್ರಿ : ಓಂ ಫ್ರೆಂಡ್ಸ್ ಅದಮಾರು - ಓಂ ಟ್ರೋಫಿ ಕ್ರಿಕೆಟ್ ಪಂದ್ಯಾಟ ; ಒಸಿಯನ್ ಫ್ರೆಂಡ್ಸ್ ಕಟಪಾಡಿ ಪ್ರಥಮ, ವೀರಮಾರುತಿ ಗರಡಿಮಜಲ್ ದ್ವಿತೀಯ

Posted On: 01-02-2023 08:55PM

ಪಡುಬಿದ್ರಿ : ಓಂ ಫ್ರೆಂಡ್ಸ್ ಅದಮಾರು ಇವರ ಆಶ್ರಯದಲ್ಲಿ ಜನವರಿ 28 ಮತ್ತು 29 ರಂದು ನಡೆದ ಓಂ ಟ್ರೋಫಿ ಕ್ರಿಕೆಟ್ ಪಂದ್ಯಾಟದಲ್ಲಿ ಒಟ್ಟು 30 ತಂಡಗಳು ಭಾಗವಹಿಸಿ ಮೊದಲ ಬಹುಮಾನ 25,000 ಒಸಿಯನ್ ಫ್ರೆಂಡ್ಸ್ ಕಟಪಾಡಿ ಹಾಗೂ ಎರಡನೇ ಬಹುಮಾನ 15,000 ವೀರಮಾರುತಿ ಗರಡಿಮಜಲ್ ಈ ಎರಡು ತಂಡಗಳು ಪಡೆದುಕೊಂಡಿದೆ.

ಈ ಪಂದ್ಯಕೂಟಕ್ಕೆ ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಮಾಜಿ ಪಂಚಾಯತ್ ಅಧ್ಯಕ್ಷ ಶಶಿಧರ್ ಶೆಟ್ಟಿ ನಡಿಗುತ್ತು, ಪಂಚಾಯತ್ ಸದಸ್ಯ ಸಂತೋಷ್ ಶೆಟ್ಟಿ, ಅದಮಾರು ಅಂಬೇಡ್ಕರ್ ಸಮಿತಿಯ ಅಧ್ಯಕ್ಷ ಜಯರಾಮ್ ಮಾಸ್ಟರ್, ಮಾಜಿ ಪಂಚಾಯತ್ ಸದಸ್ಯ ರಾಘವೇಂದ್ರ ಉಲ್ಲೂರು, ಉದ್ಯಮಿ ಸತೀಶ್ ಭಟ್ ಕುಂಡತಾಯ ಅದಮಾರು, ಉದ್ಯಮಿ ನವೀನ್ ಶೆಟ್ಟಿ ಕುಂಜೂರು, ಉದ್ಯಮಿ ವಿಜಯ ಶೆಟ್ಟಿ ಮಹಾಬಲಗುತ್ತು ಭಾಗವಹಿಸಿದ್ದರು.