ಕಾಪು : ಜೆಸಿಐ ಶಂಕರಪುರ ಜಾಸ್ಮಿನ್ ವತಿಯಿಂದ ದಕ್ಷ ಹಾಗೂ ಪ್ರಾಮಾಣಿಕ ಟ್ರಾಫಿಕ್ ಪೋಲಿಸ್ ಅಧಿಕಾರಿಯಾಗಿ ಸೆಲ್ಯೂಟ್ ದಿ ಸೈಲೆಂಟ್ ವರ್ಕರ್ ಆಗಿ ಆಯ್ಕೆಯಾದ ಉಪ ನಿರೀಕ್ಷಕರಾಗಿರುವ ಸತೀಶ್ ರವರನ್ನು ಅವರ ಮನೆಗೆ ಹೋಗಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಜೆಸಿ ಮಾಲಿನಿ ಶೆಟ್ಟಿ ಇನ್ನಂಜೆ, ಜೆಸಿಯ ಗೌರವ ಸದಸ್ಯರಾದ ಲಕ್ಷ್ಮಣ ಪೂಜಾರಿ, ಪೂರ್ವ ವಲಯ ಉಪಾಧ್ಯಕ್ಷರಾದ ಜೆಸಿ ಸಂತೋಷ್ ಕುಮಾರ್, ಪೂರ್ವಧ್ಯಕ್ಷರಾದ ಜೆಸಿ ನವೀನ್ ಅಮೀನ್, ನಿಕಟ ಪೂರ್ವ ಅಧ್ಯಕ್ಷರಾದ ಜೆಸಿ ಜಗದೀಶ್ ಅಮೀನ್ ಉಪಸ್ಥಿತರಿದ್ದರು.