ಕಾಪು : ಇಲ್ಲಿನ ಗದ್ದಿಗೆಬೆಟ್ಟು ಕೈಪುಂಜಾಲು ಉಳಿಯಾರಗೋಳಿಯ ಕಂಬೆರ್ಕಳ ಶ್ರೀ ಬಬ್ಬುಸ್ವಾಮಿ ದೈವಸ್ಥಾನ (ರಿ.)ದ ಜೀರ್ಣೋದ್ಧಾರ ಫೆಬ್ರವರಿ 3ರಂದು ಜರಗಿತು.
ಆ ಪ್ರಯುಕ್ತ ನೂತನ ಗುಡಿಗೆ ಶಿಲಾನ್ಯಾಸ ನೆರವೇರಿತು. ಇದೇ ಸಂದರ್ಭ ಅತಿಥಿಗಳಿಂದ ವಿಜ್ಞಾಪನಾ ಪತ್ರ ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷ ಡಾ| ಬಿ ಆರ್ ಶೆಟ್ಟಿ, ಕಾಪು ಕ್ಷೇತ್ರದ ಶಾಸಕರು, ಸಮಿತಿಯ ಗೌರವಾಧ್ಯಕ್ಷರಾದ ಲಾಲಾಜಿ ಆರ್ ಮೆಂಡನ್,
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ, ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ, ಕಾಪು ಮಾರಿಗುಡಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ವಾಸುದೇವ ಶೆಟ್ಟಿ, ಸಾಯಿರಾಧ ಗ್ರೂಪ್ ನ ಮನೋಹರ ಶೆಟ್ಟಿ, ಕಾಪು ಮಾರಿಗುಡಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಮೇಶ್ ಹೆಗ್ಡೆ, ಗಂಗಾಧರ ಸುವರ್ಣ, ಶಿವಪ್ಪ ನಂತೂರು,ದಿನಕರ ಬಾಬು, ಶಶಿಧರ ಶೆಟ್ಟಿ ಎರ್ಮಾಳು, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಿರಣ್ ಆಳ್ವ, ಸಮಿತಿಯ ಹತ್ತು ಸಮಸ್ತರು ಗದ್ದಿಗೆಬೆಟ್ಟು ಅಧ್ಯಕ್ಷ ರಾಜ ಕೆ ಸುವರ್ಣ, ಬಾವು ಗುತ್ತು ಡಾ.ಶಿಶಿರ್ ಶೆಟ್ಟಿ, ಶಿರಿಶ್ ಶೆಟ್ಟಿ, ಮೊಗವೀರ ಮಹಾಸಭಾದ ಅಧ್ಯಕ್ಷ ಸತೀಶ್ ಕುಂದರ್ ಕೈಪುಂಜಾಲ್ ಮತ್ತಿತರರು ಉಪಸ್ಥಿತರಿದ್ದರು.