ಕಾಪು : ಚಂದ್ರನಗರ ಬಟರ್ ಫ್ಲೈ ಗೆಸ್ಟ್ ಹೌಸ್ ವತಿಯಿಂದ ಸಮಾಜ ಸೇವಕ ಅನಿವಾಸಿ ಭಾರತೀಯ ಕಾಪು ಮೂಲದ ಮೂಸ ಕುಚ್ಚಿಗುಡ್ಡೆಯವರಿಗೆ ಬಟರ್ ಫ್ಲೈ ಗೆಸ್ಟ್ ಹೌಸ್ ನ ನಿರ್ದೇಶಕ ಹಾಜಿ ಕೆ. ಉಮ್ಮರಬ್ಬ ಚಂದ್ರನಗರ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಟರ್ ಫ್ಲೈ ಗೆಸ್ಟ್ ಹೌಸ್ ನ ಆಡಳಿತ ನಿರ್ದೇಶಕ ಫಾರೂಕ್ ಚಂದ್ರನಗರ ಮೂಸ ಕುಚ್ಚಿಗುಡ್ಡೆಯವರು ತೆರೆಮರೆಯಲ್ಲಿ ಯಾವುದೇ ಪ್ರಚಾರವಿಲ್ಲದೆ ನಮ್ಮ ಕಾಪು ಕ್ಷೇತ್ರದಲ್ಲಿರುವ ಹಲವಾರು ಬಡವರನ್ನು ಗುರುತಿಸಿ ಆರ್ಥಿಕವಾಗಿ ಸಹಾಯ ಮಾಡಿದ್ದಾರೆ ಕೊರೋಣ ಸಂದರ್ಭದಲ್ಲಿ ಸಾವಿರಾರು ಮನೆಗೆ ಅಕ್ಕಿ ಮತ್ತು ಪಡಿತರ ಕಿಟ್ ನೀಡಿದ್ದು ಅವರ ಸಮಾಜಮುಖಿ ಕೆಲಸ ನಿಜಕ್ಕೂ ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಶರ್ಫುದ್ದಿನ್ ಶೇಕ್ ಮಜೂರು, ಸಾಹಿತಿ-ಚಿಂತಕ ಅಶ್ರಫ್ ಕರಂದಾಡಿ,ಮೊಹಮ್ಮದ್ ಸಾಬಿಲ್ ಕುಚ್ಚಿಗುಡ್ಡೆ,ಅಬ್ದುಲ್ ಇಲ್ಯಾಸ್ ಮಜೂರು, ಫೈಸಲ್ ಕರಂದಾಡಿ, ಸಮದ್ ಮಲ್ಲಾರ್,ಲುಕ್ಮನ್ ಮಜೂರು,ಶಂಶುದ್ಧಿನ್ ಕರಂದಾಡಿ,ಸಾದಿಕ್ ಸಾಹಿಲ್ ಫೇಬ್ರಿಕೇಟರ್ಸ್ ಕಾಪು ಹಾಗೂ ಇನ್ನಿತರರು ಉಪಸ್ಥಿತರಿದ್ದರು.