ಕಾಪು : ಸಾಹಿತಿ-ಚಿಂತಕ ಅಶ್ರಫ್ ಕರಂದಾಡಿರವರಿಗೆ ಬಟರ್ ಫ್ಲೈ ಗೆಸ್ಟ್ ಹೌಸ್ ನಲ್ಲಿ ಸಾಮಾಜಿಕ ಕಾರ್ಯಕ್ರಮದ ವೇದಿಕೆಯಲ್ಲಿ ಹಲವಾರು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಫಾರೂಕ್ ಚಂದ್ರನಗರ ಅಶ್ರಫ್ ಕರಂದಾಡಿ ಒಬ್ಬ ಒಳ್ಳೆಯ ಚಿಂತಕ-ಸಾಹಿತಿಯಾಗಿದ್ದು ಹಲವಾರು ಕವನವನ್ನು ಬರೆದಿರುತ್ತಾರೆ. ಅವರೊಬ್ಬ ಸಾಮಾಜಿಕ ಕಳಕಳಿಯ ವ್ಯಕ್ತಿಯಾಗಿದ್ದು ಅವರನ್ನು ಸನ್ಮಾನಿಸಿ ಗುರುತಿಸಿದ್ದು ಅವರಿಗೆ ಇನ್ನಷ್ಟು ಪ್ರೇರಣೆಯಾಗಲಿದೆ ಮುಂದೆಯು ಉತ್ತಮ ಕವನ ಬರೆದು ಸಮಾಜಕ್ಕೆ ಕೊಡುಗೆ ನೀಡಲಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಬ್ದುಲ್ ಮುನೀರ್, ಶರ್ಫುದ್ದಿನ್ ಶೇಕ್ ಮಜೂರು,ಶಂಶುದ್ಧಿನ್ ಕರಂದಾಡಿ,ಯು.ಸಿ ಶೇಖಬ್ಬ ಉಚ್ಚಿಲ, ಝುಬೈರ್ ಶಿರ್ವ, ಉಸ್ಮಾನ್ ಕಾಪು, ಹೆಚ್ ಅಬ್ದುಲ್ಲ ಕಾಪು ಹಾಗೂ ಇನ್ನಿತರರು ಉಪಸ್ಥಿತರಿದ್ದರು.